ಉಡುಪಿ : ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘ (ರಿ.) ರಜತಾದ್ರಿ-ನಡೂರು ಬ್ರಹ್ಮಾವರ ಗಾಳಿಮನೆ ನಡೂರು ದಿ. ಶಿವರಾಮ ಶೆಟ್ಟಿ ಜನ್ಮ ಶತಮಾನೋತ್ಸವ ಸಮಿತಿ ಆಶ್ರಯದಲ್ಲಿ, ಸಪ್ತ ಸಂಸ್ಥೆಗಳ ಸಂಸ್ಥಾಪಕ ನಡೂರು ದಿ. ಶಿವರಾಮ ಶೆಟ್ಟಿ ಇವರ ಪುತ್ಥಳಿ ಉದ್ಘಾಟನೆ, ಶಾಲಾ ನೂತನ ವಾಹನ ಹಸ್ತಾಂತರ, ಉಡುಪಿ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣದ ವಸ್ತು ಪ್ರದರ್ಶನ & ಕಲಿಕೋತ್ಸವ, ಹಿರಿಯರ ಕರಾವಳಿ ಕೃಷಿ ಉಪಕರಣಗಳ ಪ್ರದರ್ಶನ, ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭ ಅ.26 ರಂದು ನಡೂರು ಶ್ರೀವಾಣಿ ಪ್ರೌಢಶಾಲಾ ವಠಾರದಲ್ಲಿ ನಡೆಯಲಿದೆ.
ನಡೂರು ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ಭೋಜ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮಾಜಿ ಲೋಕಾಯುಕ್ತರಾದ ಜಸ್ಟಿಸ್ ಸಂತೋಷ ಹೆಗ್ಡೆ, ಬೆಂಗಳೂರು ನಾರಾಯಣ ಹೃದಯಾಲದ ಎಂ.ಡಿ. ಡಾ. ದೇವಿ ಶೆಟ್ಟಿ, ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ, ಮುಂಬೈ ವಸುಧಾ ಕೆಮಿಕಲ್ಸ್ ನ ಎಂ.ಡಿ. ಬಿ. ಸುಧಾಕರ ಶೆಟ್ಟಿ, ಉದ್ಯಮಿಗಳಾದ ಹೆಚ್. ಜಯಶೀಲ ಶೆಟ್ಟಿ, ಬೆಂಗಳೂರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಎಚ್.ಎಸ್. ಶೆಟ್ಟಿ, ಬೆಂಗಳೂರು ಸೌತ್ ಫೀಲ್ಡ್ ಪೈಂಟ್ಸ್ ಎಂ.ಡಿ. ಶಿವರಾಮ ಹೆಗ್ಡೆ, ಶತಮಾನೋತ್ಸವ ಸಲಹಾ ಸಮಿತಿ ಅಧ್ಯಕ್ಷ ಎಂ. ಚಂದ್ರಶೇಖರ ಕಲ್ಕೂರ, ಮುಂಬೈ ಕೆನರಾ ಟೂರ್ಸ್ & ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ ನ ಎಸ್.ಬಿ ಶೆಟ್ಟಿ, ಉಡುಪಿ ಜಿಲ್ಲೆ ವಿದ್ಯಾಂಗ ಉಪನಿರ್ದೇಶಕರಾದ ಕೆ. ಗಣಪತಿ, ದುಬೈ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ನ ಎಂ.ಡಿ. ವಕ್ವಾಡಿ ಪ್ರವೀಣ್ ಶೆಟ್ಟಿ, ಮಟಪಾಡಿ ಶ್ರೀ ನಿಕೇತನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಟಪಾಡಿ, ಬೆಂಗಳೂರು ಯುನಿರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಚೇರ್ಮನ್ ಉಪೇಂದ್ರ ಶೆಟ್ಟಿ, ಕಾಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಲಂಧರ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ. ಭುಜಂಗ ಶೆಟ್ಟಿ, ಉಡುಪಿ ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಜಿಲ್ಲಾ ವಿಷಯ ಪರೀಕ್ಷಕರಾದ ನಾಗರಾಜ್, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಬಂಧಕರಾದ ಗಣಪ ಎನ್. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.



