ಕುಂದಾಪುರ : ಠಾಣಾ ವ್ಯಾಪ್ತಿಯ ಕೋಣೆ ಗ್ರಾಮದ ಕರ್ನಾಟಕ ಬ್ಯಾಂಕ್ ಶಾಖೆಯ ಹಾಗೂ ಬ್ಯಾಂಕಿನ ಎಟಿಎಂ ಕೊಠಡಿಯ ಬೀಗ ಒಡೆದು ಒಳ ಪ್ರವೇಶಿಸಿ ಕಳ್ಳತನಕ್ಕೆ ಪ್ರಯತ್ನಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಕುಂದಾಪುರ ಪೊಲೀಸ್ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ.
ಕೊಪ್ಪಳ ಕಾರಟಗಿ ಇಂದ್ರನಗರ ನಿವಾಸಿ ಮೊಹಮ್ಮದ್ ಹುಸೇನ (22) ಮತ್ತು ಓರ್ವ ಬಾಲಕ ಬಂಧಿತರು.
ಅ.16 ರಂದು ಕೋಣಿ ಗ್ರಾಮದ ಕರ್ನಾಟಕ ಬ್ಯಾಂಕ್ ಶಾಖೆಯ ಶೆಟರ್ ಬಾಗಿಲಿಗೆ ಅಳವಡಿಸಿದ ಕೀಯನ್ನು ಮುರಿದು ಬ್ಯಾಂಕಿನ ಒಳಗೆ ಪ್ರವೇಶಿಸಿ ಕಳ್ಳತನಕ್ಕೆ ಪ್ರಯತ್ನಿಸಿದ್ದು ಹಾಗೂ ಸದ್ರಿ ಬ್ಯಾಂಕಿನ ಕಟ್ಟಡದಲ್ಲಿರುವ ಕರ್ನಾಟಕ ಬ್ಯಾಂಕಿನ ಎಟಿಎಂ ಕೊಠಡಿಯ ಶೇಟರ್ ಗೆ ಅಳವಡಿಸಿದ ಬೀಗವನ್ನು ಜಖಂಗೊಳಿಸಿ ಒಳಪ್ರವೇಶಿಸಿ ಕಳ್ಳತನಕ್ಕೆ ಪ್ರಯತ್ನಿಸಿದ್ದು, ಎಂಬುದಾಗಿ ಕುಂದಾಪುರ ಪೊಲೀಸ್ ಠಾಣಾ ಅ.ಕ್ರ 94-2024 ಕಲಂ 331(4), 62 BNS ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯ ಸಂಬಂಧ ಸಿದ್ದಲಿಂಗಯ್ಯ ಟಿ ಎಸ್, ಪರಮೇಶ್ವರ ಹೆಗಡೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರವರ ಮಾರ್ಗದರ್ಶನದಂತೆ ಬೆಳ್ಳಿಯಪ್ಪ ಕೆ.ಯು ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕರಾದ ನಂಜಪ್ಪ ಎನ್ ರವರ ನಿರ್ದೇಶನದಂತೆ ಠಾಣಾ ಪಿ.ಎಸ್.ಐ ವಿನಯ್ ಎಂ ಕೊರ್ಲಹಳ್ಳಿ, (ಕಾ&ಸು), ಪಿ.ಎಸ್.ಐ ಪುಷ್ಪ (ತನಿಖೆ) ಹಾಗೂ ಸಿಬ್ಬಂದಿಗಳಾದ ಮೋಹನ, ಸಂತೋಷ, ಅವಿನಾಶ, ಶ್ರೀಧರ, ಘನಶ್ಯಾಮ ರವರು ಕಾರ್ಯಚರಣೆಯಲ್ಲಿ ನಡೆಸಿ ಪ್ರಕರಣ ದಾಖಲಾದ 72 ಗಂಟೆಯಲ್ಲಿ ಆರೋಪಿತರಾದ ಮೊಹಮ್ಮದ್ ಹುಸೇನ (22 ವರ್ಷ) ಹಾಗೂ ಆತನೊಂದಿಗೆ ಓರ್ವ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಈ ಹಿಂದೆ ಬ್ಯಾಂಕ್ ಕಳ್ಳತನ, ಬೈಕ್ ಕಳ್ಳತನ ಮತ್ತು ಅಂಗಡಿ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿರುತ್ತದೆ.
ಆರೋಪಿಗಳು ವಿವಿಧ ಪೊಲೀಸ್ ಠಾಣಾ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ
- 1) ಕುಂದಾಪುರ ಪೊಲೀಸ್ ಠಾಣಾ ಅ.ಕ್ರ. 94/2024 ಕಲಂ 331(4), 62 BNS
- 2) ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ. 87/2024 ಕಲಂ 331(4), 305 BNS
- 3) ಪಡುಬಿದ್ರಿ ಪೊಲೀಸ್ ಠಾಣಾ ಅ.ಕ್ರ. 133/2024 ಕಲಂ 331(4), 305 BNS
- 4) ಬಳ್ಳಾರಿ ರೈಲ್ವೆ ಪೊಲೀಸ್ ಠಾಣಾ ಅ.ಕ್ರ. 32/2024 ಕಲಂ 303(2) BNS
ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಅಂದಾಜು 31,948/- ರೂ ಮೌಲ್ಯದ ಮೋಟಾರ್ ಸೈಕಲ್ನ್ನು ವಶಪಡಿಸಿ ಕೊಳ್ಳಲಾಗಿದೆ.
ಈ ಪ್ರಕರಣವನ್ನು ಭೇದಿಸುವಲ್ಲಿ ಸಹಕರಿಸಿದ ತಂಡಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ ಕೆ. ಐ ಪಿ ಎಸ್ ರವರು ಅಭಿನಂದಿಸಿರುತ್ತಾರೆ.

