ಹಿರಿಯಡಕ: ಕುಕ್ಕೆಹಳ್ಳಿ ಗ್ರಾಮದ ಸ್ವಸ್ತಿಕಾ (26) ಅವರ ಮೊಬೈಲ್ ಸಂಖ್ಯೆಗೆ ದೂರವಾಣಿ ಕರೆಯೊಂದು ಬಂದಿದ್ದು ಫೀಡೆಕ್ಸ್ ಕಂಪೆನಿಯಿಂದ ಪಾರ್ಸೆಲ್ ಬಂದಿದೆ ಅದರಲ್ಲಿ ಡ್ರಗ್ಸ್ ಇರುವುದಾಗಿ ಹೆದರಿಸಿ ಒಟಿಪಿ ನೀಡುವಂತೆ ಸೂಚಿಸಿದ್ದರು.
ಅದರಂತೆ ಒಟಿಪಿ ನೀಡಿದ ಪರಿಣಾಮ ತನ್ನ ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂ.ಗಳನ್ನು ವಂಚಕರು ಲಪಟಾಯಿಸಿದ್ದಾರೆ ಎಂದು ವಂಚನೆಗೆ ಒಳಗಾಗಿರುವ ಯುವತಿ ಹಿರಿಯಡಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

