ದೆಹಲಿ : ದೆಹಲಿಯಲ್ಲಿ ವಾಯು ಗುಣಮಟ್ಟವು ತೀವ್ರ ಹದಗೆಟ್ಟ ಪರಿಸ್ಥಿತಿಗೆ ತಲುಪಿದ ಕಾರಣ, ಟ್ರಕ್ ಪ್ರವೇಶ ನಿಷೇಧ ಮತ್ತು ಸಾರ್ವಜನಿಕ ಯೋಜನೆಗಳ ನಿರ್ಮಾಣವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಹಲವು ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳು ಇಂದು ಬೆಳಗ್ಗಿನಿಂದ ಜಾರಿಗೆ ಬಂದಿವೆ.
ಸಫ್ದರ್ಜಂಗ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 8 ಗಂಟೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಪ್ರಕಾರ, ವಾಯು ಗುಣಮಟ್ಟದ ಸೂಚ್ಯಂಕವು 484 ರಷ್ಟಿದೆ, ಇದು ಈ ಋತುವಿನ ಅತ್ಯಂತ ಕಳಪೆ ಗುಣಮಟ್ಟವಾಗಿರುತ್ತದೆ.
ಅಗತ್ಯ ವಸ್ತುಗಳನ್ನು ಸಾಗಿಸುವ/ಶುದ್ಧ ಇಂಧನ ಬಳಸುವುದನ್ನು ಹೊರತುಪಡಿಸಿ ಯಾವುದೇ ಇನ್ನಿತರ ಟ್ರಕ್ಗಳನ್ನು ದೆಹಲಿಗೆ ಅನುಮತಿಸುವುದಿಲ್ಲ. ಎಲೆಕ್ಟ್ರಿಕ್ ವೆಹಿಕಲ್ ಗಳು ಹಾಗೂ ಸಿಎನ್ ಜಿ & ಬಿಎಸ್-VI ಡೀಸೆಲ್ ವಾಹನಗಳನ್ನು ಹೊರತುಪಡಿಸಿ ಅನಿವಾರ್ಯವಲ್ಲದ ಲಘು ವಾಣಿಜ್ಯ ವಾಹನಗಳನ್ನು ನಿಷೇಧಿಸಲಾಗಿದೆ.
ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಹೆದ್ದಾರಿ, ರಸ್ತೆ, ಮೇಲ್ಸೇತುವೆ, ವಿದ್ಯುತ್ ಮಾರ್ಗ, ಪೈಪ್ಲೈನ್ಗಳು ಮತ್ತು ಇತರೆ ಸಾರ್ವಜನಿಕ ಯೋಜನೆಗಳ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾರುತ್ತದೆ.
10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸುವಂತೆ ದೆಹಲಿಯ ಸರ್ಕಾರವು ತಿಳಿಸಿರುತ್ತದೆ.
ಎಕ್ಯುಐ 400 ನ್ನು ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮತ್ತು ಆರೋಗ್ಯವಂತ ವ್ಯಕ್ತಿಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದಾಗಿದೆ.

