ಕುಂದಾಪುರ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾರ್ಕೂರ್ ರೋಟರಿ ಕ್ಲಬ್ ವಲಯ ಮಟ್ಟದ ಕ್ರೀಡಾಕೂಟದ ಪಥ ಸಂಚಲನ ಗೌರವ ಸ್ವೀಕಾರದ ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಬಾರ್ಕೂರು ನೇಶ್ ನಲ್ ಪದವಿ ಪೂರ್ವ ಕಾಲೇಜಿನ ಬಿ. ಉಮಾಶಂಕರ್ ಶೆಟ್ಟಿ ಕ್ರೀಡಾಂಗಣದಲ್ಲಿ ರೋಟರಿ ಕ್ಲಬ್ ಬಾರ್ಕೂರು ಇವರ ಕ್ರೀಡಾ ಸಂಗಮ ಕಾರ್ಯಕ್ರಮವನ್ನು ರೊ! MPHF ಬಿ.ಎಂ.ಭಟ್ ಜಿಲ್ಲಾ ಗವರ್ನರ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ! ಗಣೇಶ್ ಕುಮಾರ್ ಶೆಟ್ಟಿ ಬಿ. ಅಧ್ಯಕ್ಷರು ರೋಟರಿ ಕ್ಲಬ್ ಬಾರ್ಕೂರ್ ಇವರು ವಹಿಸಿದ್ದರು.
ಬಿ.ಶಾಂತಾರಾಮ ಶೆಟ್ಟಿ ಅಧ್ಯಕ್ಷರು ಬಾರ್ಕೂರು ಎಜುಕೇಶನ್ ಸೊಸೈಟಿ ಇವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೊ! ಆರ್ಎಂ ಸಾಮಗ, ರೊ, ಆನಂದ ಶೆಟ್ಟಿ, ರೊ, ರಾಜಾರಾಮ್ ಶೆಟ್ಟಿ, ರೊ, ದಿನೇಶ ನಾಯರಿ, ರೊ, ಶಂಕರ್ ಸುವರ್ಣ, ರೊ, ಸಲಿತಾ ರಾಜೇಶ್ ಶೆಟ್ಟಿ, ರೊ, ಚರಣ್ ಶೆಟ್ಟಿ, ರೊ, ಎಚ್ ಅಜಿತ್ ಕುಮಾರ್ ಶೆಟ್ಟಿ, ರೊ, ಆರ್ ರತ್ನಾಕರ್ ಶೆಟ್ಟಿ , ರೊ, ಗಣೇಶ್ ಕುಮಾರ್ ಶೆಟ್ಟಿ ಬಿ, ಹಾಗೂ ಸರ್ವ ಸದಸ್ಯರು ರೋಟರಿ ಕ್ಲಬ್ ಬಾರ್ಕೂರು ಉಪಸ್ಥಿತರಿದ್ದರು.

