ಬೆಂಗಳೂರಿನ ಚಾಮರಾಜನಗರ ಪೇಟೆಯಲ್ಲಿ ನ.30 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತುಳುನಾಡಿನ ದೈವ ಪಂಜುರ್ಲಿಯ ಅಣಕ ಮಾಡಲಾಗಿದೆ. ಇದು ತುಳುನಾಡಿನ ಸಂಸ್ಕೃತಿ, ತುಳುವರ ಭಾವನೆ, ನಂಬಿಕೆಗೆ ಧಕ್ಕೆ ಉಂಟು ಮಾಡಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ವಕ್ಫ್ ಸಚಿವರಾದ ಜಮೀರ್ ಅವರನ್ನು ಪಂಜುರ್ಲಿ ವೇಷಧರಿಸಿದ ಇಬ್ಬರು ವ್ಯಕ್ತಿಗಳು ಅಪ್ಪಿಕೊಂಡು ಇವರೇ ನಮ್ಮ ನಾಯಕವೆಂಬಂತೆ ಬಿಂಬಿಸಿರುವ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದನ್ನು ನೋಡಿದ ವೀಕ್ಷಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ
ಕಾಂತರ ಸಿನಿಮಾ ಬಂದ ಮೇಲೆ ದೈವದ ಅಣಕು ಪ್ರದರ್ಶನ ಮಾಡುತ್ತಿರುವುದು ತುಳುವರ ಕೆಂಗಣ್ಣಿಗೆ ಗುರಿಯಾಗಿದೆ. ದೈವಾರಾಧನೆ ಎಂಬುದು ಮನೋರಂಜನೆಯ ಪ್ರದರ್ಶನವಲ್ಲ ಅಥವಾ ಛದ್ಮವೇಷ ಧರಿಸಿದಂತೆ ಅಲ್ಲ. ದೈವಾರಾಧನೆ ತುಳುನಾಡಿನ ಕರಾವಳಿಯ ಆರಾಧನಾ ಪದ್ದತಿ ಹಾಗಾಗಿ ದೈವಾರಾಧನೆ ಕಲೆಯ ರಕ್ಷಣೆಗಾಗಿ ಪ್ರತ್ಯೇಕ ಕಾಯ್ದೆ ತರುವಂತೆ ಆಗ್ರಹ ಮಾಡಲಾಗಿದೆ.

