ಇಂದಿನ ದಿನಗಳಲ್ಲಿ ಹೃದಯಾಘಾತಕ್ಕೆ ಗುರಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯುವ ಪೀಳಿಗೆ ಇದಕ್ಕೆ ಬಲಿಯಾಗುತ್ತಿರುವುದು, ನಿಜಕ್ಕೂ ನೋವುಂಟು ಮಾಡುತ್ತಿದೆ. ಹಾಗಾದರೆ ಹೃದಯಾಘಾತದ ಲಕ್ಷಣಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಹರ್ಟ್ ಅಟ್ಯಾಕ್ ಕಾಣಿಸಿಕೊಳ್ಳುವ ಮೊದಲು ಗೋಚರವಾಗುವ ಕೆಲವೊಂದು ಲಕ್ಷಣಗಳು ಇಂತಿವೆ,
• ಇದ್ದಕ್ಕಿದಂತೆ ಎದೆಯಲ್ಲಿ ನೋವು ಮತ್ತು ಒತ್ತಡ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
• ಕಣ್ಣಿನಲ್ಲಿ ಉರಿ ಮತ್ತು ಕೈಗಳ ತೋಳುಗಳಲ್ಲಿ, ಕುತ್ತಿಗೆ ಭುಜಗಳ ಭಾಗದಲ್ಲಿ ನೋವು ಕಂಡು ಬರುತ್ತದೆ.
• ಇದ್ದಕ್ಕಿದಂತೆ ಉಸಿರಾಟದ ಸಮಸ್ಯೆ ಉದ್ಬವಿಸಬಹುದು.
• ಸುಸ್ತು ಮತ್ತು ಆಯಾಸ ಕಂಡುಬರುತ್ತದೆ.
• ಹೃದಯದ ಬಡಿತದಲ್ಲಿ ಏರುಪೇರು ಆಗುವುದು ಗೋಚರವಾಗುತ್ತದೆ
ಹೃದಯಘಾತಕ್ಕೆ ಪ್ರಮುಖ ಕಾರಣಗಳನ್ನು ಗಮನಿಸುವುದಾದರೆ :
ಒತ್ತಡದ ಜೀವನಶೈಲಿ, ಅತಿಯಾದ ಮಾನಸಿಕ ಒತ್ತಡ ಹಾಗೂ ಆಹಾರಕ್ರಮದಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತದೆ. ಮತ್ತು ಮಧು ಮೇಹ ಕಾಯಿಲೆ, ಹೈ ಕೊಲೆಸ್ಟ್ರಾಲ್ ಹಾಗೂ ಅಧಿಕ ರಕ್ತದೊತ್ತಡದ ಕಾಯಿಲೆಯಿಂದ ಬಳಲುತ್ತಿರುವವರು ಹೃದಯಘಾತಕ್ಕೆ ಒಳಗಾಗುವ ಸಂಭವನೀಯತೆ ಹೆಚ್ಚಿರುತ್ತದೆ.
ಹೃದಯದ ಆರೋಗ್ಯಕ್ಕೆ ಕೆಲವೊಂದು ಸಲಹೆಗಳು :
ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು. ವ್ಯಾಯಾಮ, ಯೋಗಾಭ್ಯಾಸ ಮಾಡುವುದು, ವರ್ಷಕ್ಕೆ ಒಮ್ಮೆ ಹೃದಯದ ಪರೀಕ್ಷೆ ಮಾಡಿಸಿಕೊಳ್ಳುವುದು, ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು. ಧೂಮಪಾನ ಮತ್ತು ಮಧ್ಯಪಾನವನ್ನು ದೂರವಿರುವುದು, ಇವೆಲ್ಲವೂ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ.

