ಬೆಳಗಾವಿ : ಬೆಳಗಾವಿಯ ಅಧಿವೇಶನದಲ್ಲಿ ಬಡ ಮೀನುಗಾರರ ಪರವಾಗಿ ಶಾಸಕ ಕಿರಣ್ ಕೊಡ್ಗಿ ಅವರು ಧ್ವನಿಯೆತ್ತಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ 2018 -19 ನೇ ಸಾಲಿನ ಮತ್ಯಾಶ್ರಯದ ಫಲಾನುಭವಿಗಳಿಗೆ ಬಾಕಿ ಇರುವ ಹಣವನ್ನು ಪಾವತಿಸುವಂತೆ ನಿನ್ನೆ ನಡೆದ ಬೆಳಗಾವಿಯ ಅಧಿವೇಶನದಲ್ಲಿ ಕುಂದಾಪುರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಪ್ರಸ್ತಾಪಿಸಿ ಬಡ ಮೀನುಗಾರರ ಮನೆಯ ಪರಿಸ್ಥಿತಿ ಕುರಿತು, ಮೀನುಗಾರಿಕಾ ಸಚಿವರಿಗೆ ತಿಳಿಸಿದ್ದಾರೆ. ಮತ್ತು ಮತ್ಯಾಶ್ರಯದ ಫಲಾನುಭವಿಗಳಿಗೆ ಬಾಕಿ ಇರುವ ಹಣವನ್ನು ಪಾವತಿಸುವಂತೆ ಕೋರಿಕೊಂಡಿದ್ದಾರೆ.

