ಹಿರಿಯಡಕ ಜಿಲ್ಲಾ ಕಾರಗೃಹಕ್ಕೆ ಎಡಿಶನಲ್ ಎಸ್.ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಪೊಲೀಸರು ಡಿ.9 ರಂದು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಜೈಲಿನ ಎಲ್ಲ ವಿಭಾಗಗಳಗೂ ತೆರಳಿ ಗಾಂಜಾ, ಸಿಗರೇಟ್, ತಂಬಾಕು, ಮೊಬೈಲ್ ಬಳಕೆಯ ಬಗ್ಗೆ ಪರಿಶೀಲಿಸಿದರು. ಈ ವೇಳೆ ಪೊಲೀಸರಿಗೆ ಅಕ್ರಮ ಚಟುವಟಿಕೆಗೆ ಸಂಬಂಧಿಸಿದ ಯಾವುದೇ ವಸ್ತುಗಳು ಲಭ್ಯವಾಗಿಲ್ಲ.
ದಾಳಿಯಲ್ಲಿ ಡಿವೈಎಸ್ಪಿ ಪ್ರಭು, ಮಲ್ಪೆ ಠಾಣೆಯ ಇನ್ ಸ್ಪೆಕ್ಟರ್ ಮಂಜುನಾಥ್, ಮಣಿಪಾಲ ಠಾಣೆಯ ಎಸ್ಐ ದೇವರಾಜ್ ಉಪಸ್ಥಿತರಿದ್ದರು.

