ಸುಳ್ಯ: ಕಾರಿಗೆ ಡೀಸೆಲ್ ತುಂಬಿಸಿ ಹಣ ಪಾವತಿಸಿದೇ ಕಾರು ಚಾಲಕ ಪರಾರಿಯಾಗಿರುವ ಘಟನೆ ಸುಳ್ಯದ ಪೈಚಾರಿನಲ್ಲಿ ನಡೆದಿದೆ.
ಸುಳ್ಯ ಕಡೆಯಿಂದ ಪೈಚಾರಿನ ಪೆಟ್ರೋಲ್ ಬಂಕ್ಗೆ ಬಂದ ಕಾರಿನ ಚಾಲಕನ ಸೂಚನೆಯಂತೆ ಬಂಕ್ ಸಿಬಂದಿ 5 ಸಾವಿರ ರೂ.ನ 65 ಲೀಟರ್ ಡೀಸೆಲ್ ತುಂಬಿಸಿದ್ದು, ಬಳಿಕ ಚಾಲಕ ಸಿಬಂದಿಯಲ್ಲಿ ಒಂದು ಬಾಟಲ್ ನೀಡಿ ಅದರಲ್ಲಿ ಎರಡು ಲೀಟರ್ ಪೆಟ್ರೋಲ್ ತುಂಬಿಸುವಂತೆ ತಿಳಿಸಿದ್ದು, ಸಿಬಂದಿ ಪೆಟ್ರೋಲ್ ತುಂಬಿಸಲು ಮುಂದಾಗುತ್ತಿದ್ದಂತೆ ಕಾರು ಚಾಲಕ ಕಾರನ್ನು ಅಲ್ಲಿಂದ ವೇಗವಾಗಿ ಚಲಾಯಿಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಬಗ್ಗೆ ಬಂಕ್ ಸಿಬ್ಬಂದಿ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಕಾರಿಗೆ ಹಾಕಲಾಗಿದ್ದ ನಂಬರ್ ಪ್ಲೇಟ್ ಕೂಡ ನಕಲಿ ಎಂಬುದು ತಿಳಿದುಬಂದಿದೆ.

