ಉಡುಪಿ: ಮಂಗಳೂರಿನಲ್ಲಿ ಎಂಬಿಎ ಓದುತ್ತಿದ್ದ ಕೆ. ವೆಂಕಟೇಶ್ ಹೆಗ್ಡೆ ಅವರು ಮನೆ ಹಿಂದಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಲವಾರು ದಿನಗಳಿಂದ ಓದಲು ಕಷ್ಟವಾಗುತ್ತಿದೆ ಎಂದು ಮನೆಯವರಲ್ಲಿ ಹೇಳಿಕೊಂಡಿದ್ದು, ಮೌನವಾಗಿ ಇರುತ್ತಿದ್ದ ಎನ್ನಲಾಗಿದೆ.

ಇದೇ ಕಾರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



