ಕಾರ್ಕಳ: ಸಾಣೂರಿನಲ್ಲಿ ಗುರುವಾರ (ಜ.23) ಬೆಳಗ್ಗೆ ಸರಕಾರಿ ಬಸ್ ಟೆಂಪೊಗೆ ಡಿಕ್ಕಿ ಹೊಡೆದ ಪರಿಣಾಮ 10 ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಚಿಕ್ಕೋಡಿ ಡಿಪೊಗೆ ವಿಭಾಗದ ಬಸ್ ಬೆಳಗಾವಿ ಕಡೆಯಿಂದ ಧರ್ಮಸ್ಥಳ ಕಡೆಗೆ ಸಾಗುತ್ತಿದ್ದಾಗ ಸಾಣೂರು ರಾಮ ಮಂದಿರದ ಬಳಿ ನಿಂತಿದ್ದ ಟೆಂಪೊಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ 10ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ ಎಂದು ವರದಿಯಾಗಿದೆ.




