‘ಬಿಗ್ ಬಾಸ್ ಕನ್ನಡ 11’ರ ಆಟಕ್ಕೆ ತೆರೆಬಿದ್ದಿದೆ. ಅಂತೂ ಇಂತೂ ಗಾನ ಕೋಗಿಲೆ ಹನುಮಂತ ಬಿಗ್ ಬಾಸ್ 11ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ಹನುಮಂತ ವಿನ್ನರ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಬಿಗ್ ಬಾಸ್ ಆಟ ಶುರುವಾಗಿ 4 ವಾರ ಕಳೆದ ಮೇಲೆ ಸ್ಪರ್ಧಿಯಾಗಿ ದೊಡ್ಮನೆಗೆ ಹನುಮಂತ ಕಾಲಿಟ್ಟರು. ಮನೆಯ ಜಗಳ ನೋಡಿ ಹನುಮಂತು ಬೆಚ್ಚಿಬಿದ್ದಿದ್ದರು. ಆದರೂ ಛಲ ಬಿಡದೇ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಫಿನಾಲೆಗೆ ಮೊದಲು ಆಯ್ಕೆಯಾದರು.

ಬಿಗ್ ಬಾಸ್ ಫಿನಾಲೆ ಕೊನೆ ಹಂತ ರೋಚಕತೆಯಿಂದ ಕೂಡಿತ್ತು. ಯಾರು ವಿನ್ನರ್ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಸುದೀಪ್ ತಮ್ಮ ಬಲಭಾಗಕ್ಕೆ ಹನುಮಂತ ಹಾಗೂ ಎಡ ಭಾಗಕ್ಕೆ ತ್ರಿವಿಕ್ರಮ್ ನಿಂತಿದ್ದರು.

ಕೊನೆಗೂ ಸುದೀಪ್ ಅವರು ಹನುಮಂತನ ಕೈ ಎತ್ತುವ ಮೂಲಕ ವಿನ್ನರ್ ಎಂದು ಘೋಷಿಸಿದರು. ಗೆದ್ದ ಖುಷಿಯಲ್ಲಿ ಹನುಮಂತ, ಸುದೀಪ್ ಕಾಲಿಗೆ ಬಿದ್ದು ನಮಸ್ಕರಿಸಿದರು. ಇತ್ತ ಹನುಮಂತನ ಫ್ಯಾನ್ಸ್ ಸಂಭ್ರಮಾಚರಣೆ ಮಾಡಿದರು.
ಬಿಗ್ ಬಾಸ್ ಸೀಸನ್ ಹನ್ನೊಂದರ ಟ್ರೋಫಿ ಎತ್ತಿದ ಹನುಮಂತನಿಗೆ ಐದೂವರೆ ಕೋಟಿ ಕನ್ನಡಿಗರ ಆಶೀರ್ವಾದ ಸಿಕ್ಕಿದೆ. ಬಿಗ್ ಬಾಸ್ ಶುರುವಾದ ಹದಿನೈದು ದಿನಗಳ ನಂತರ ವೈಲ್ಡ್ ಕಾರ್ಡ್ ಮೂಲಕ ಹನುಮಂತ ಎಂಟ್ರಿ ಕೊಟ್ಟಿದ್ದರು.
ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ವಿನ್ನರ್ ಆಗಿದ್ದು ಇದೇ ಮೊದಲು. ಈಗ ಹನುಮಂತ 50 ಲಕ್ಷದ ಒಡೆಯನಾಗಿದ್ದಾರೆ. ಜವಾರಿ ಹೈದ ಭಾರೀ ವೋಟ್ ಗಳಿಸಿ ದಾಖಲೆ ಸೃಷ್ಟಿಸಿದ್ದಾರೆ.

