ಉಡುಪಿ: ಸರಕಾರಿ ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದ ಮಹಿಳೆಯನ್ನು ಅದೇ ಬಸ್ಸಿನಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ಉಡುಪಿ ಸಮೀಪ ಪುತ್ತೂರು ಬಳಿಯ ಸರಕಾರಿ ಬಸ್ ನಿಂದ ಕೆಳಗಿಳಿಯುವ ಸಂದರ್ಭದಲ್ಲಿ ಮಹಿಳೆಯೋರ್ವರು ಆಯತಪ್ಪಿ ಬಿದ್ದು ಗಾಯಗೊಂಡಿದ್ದರು.

ವಿಷಯ ತಿಳಿದ ಸಾರ್ವಜನಿಕರು ಗಾಯಾಳು ಮಹಿಳೆಯನ್ನು ಅದೇ ಬಸ್ ನ ಮೂಲಕ ಕರೆ ತಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಮಹಿಳೆಯನ್ನು ಉಡುಪಿ ಹನುಮಂತ ನಗರದ ನಿವಾಸಿ ಶಾಂತಾ (55) ಎಂದು ಗುರುತಿಸಲಾಗಿದೆ. ಮಹಿಳೆ ರಕ್ಷಣಾ ಸಮಯ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಆಕೆಯ ಬಲತೋಳಿನ ಮೂಳೆ ಸಂಪೂರ್ಣ ಮುರಿದಿತ್ತು ಎನ್ನಲಾಗಿದೆ.

ಪ್ರಕರಣದ ಬಗ್ಗೆ ಸಂಚಾರಿ ಠಾಣೆಗೆ ಹಾಗೂ ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.




