ಕಾರ್ಕಳ:- ಉಡುಪಿ ತಾಲ್ಲೂಕಿನ ಕಾರ್ಕಳದಲ್ಲಿ ಪೊಲೀಸ್ ಠಾಣೆ ವ್ಯವಸ್ಥೆ ಸುಸಜ್ಜಿತವಾಗಿಲ್ಲ, ಅದನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯ. ನಗರ ಮತ್ತು ಗ್ರಾಮಾಂತರ ಎರಡು ಪೊಲೀಸ್ ಠಾಣೆಗಳು ನಗರದೊಳಗೆ ಇದೆ. ಆದ್ದರಿಂದ ಕಾರ್ಕಳದ ಬಜಗೋಳಿಯಲ್ಲಿ ನೂತನ ಠಾಣೆ ತೆರೆಯಬೇಕು ಎಂಬುವುದು ಹಲವರ ಆಗ್ರಹವಾಗಿತ್ತು.
ಈ ಪ್ರಸ್ತಾವನೆ ಹಾಗೇ ಬಾಕಿ ಉಳಿದಿದೆ. ಈದು, ಮಾಳ, ಬೆಳ್ಮಣ್, ನಿಟ್ಟೆ, ಮುಂಡ್ಕೂರು ಈ ಭಾಗದಲ್ಲಿ ಯಾವುದೇ ರೀತಿಯ ಅಪರಾಧ ಪ್ರಕರಣಗಳು ನಡೆದರೂ ಕಾರ್ಕಳದವರೆಗೆ ಓಡಿ ಬರುವ ಅವಶ್ಯಕತೆ ಇರುವುದಿಲ್ಲ. ಕೆಲ ವರ್ಷಗಳ ಹಿಂದೆಯೇ ಬಜಗೋಳಿಯಲ್ಲಿ ಪೊಲೀಸ್ ಠಾಣೆ ಸ್ಥಾಪಿಸಲು ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಬೇಡಿಕೆಗೆ ತಕ್ಕ ಸ್ಪಂದನೆ ಬರಲಿಲ್ಲ.
ಅಷ್ಟೇ ಅಲ್ಲದೆ ಕಾರ್ಕಳಕ್ಕೆ ಮಹಿಳಾ ಪೊಲೀಸ್ ಠಾಣೆಯ ಅಗತ್ಯ ಕೂಡಾ ಇದೆ ಎಂದು ಮನವಿಯನ್ನು ಸಲ್ಲಿಸಲಾಗಿತ್ತು. ಈ ವಿಚಾರ ಕೂಡಾ ಈಗ ಮೂಲೆಗುಂಪಾಗಿದೆ. ಕಾರ್ಕಳ ನಗರಕ್ಕೆ ಕೂಡಾ ಇನ್ಸ್ಪೆಕ್ಟರ್ ಇಲ್ಲ. ಈ ಹುದ್ದೆ ಖಾಲಿಯಾಗಿಯೇ ಉಳಿದಿದೆ. ಈ ಎಲ್ಲಾ ಮನವಿಗಳನ್ನು ಶೀಘ್ರವಾಗಿ ಪರಿಶೀಲಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಸಾರ್ವಜನಿಕರು ಮನವಿಯಿಟ್ಟಿದ್ದಾರೆ.

