ಸಾಮಾನ್ಯವಾಗಿ ನಾವು ಅನೇಕ ಹಣ್ಣುಗಳನ್ನು ಇಷ್ಟಪಟ್ಟು ತಿನ್ನುತ್ತೇವೆ. ಎಲ್ಲಾ ಹಣ್ಣುಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹೇರಳವಾದ ಪೌಷ್ಟಿಕಾಂಶವಿರುತ್ತದೆ. ಆದರೆ ಕೆಲವೊಮ್ಮೆ ಹಣ್ಣಿನ ಸಿಪ್ಪೆಯ ರುಚಿ ನಾಲಗೆಗೆ ಹಿಡಿಸೋದಿಲ್ಲ. ಅದನ್ನು ಕಿತ್ತೆಸೆದು ಕೇವಲ ಹಣ್ಣಿನ ಭಾಗವನ್ನು ಮಾತ್ರ ತಿನ್ನುತ್ತೇವೆ. ಹೀಗೆ ಮಾಡುವುದು ತಪ್ಪು. ಏಕೆಂದರೆ ಹಣ್ಣಿನಲ್ಲಿರುಷ್ಟೇ ಪೌಷ್ಠಿಕಾಂಶ ಅದರ ಸಿಪ್ಪೆಯಲ್ಲೂ ಇದ್ದೇ ಇರುತ್ತದೆ. ಅದರಲ್ಲಿ ಮುಖ್ಯವಾಗಿ ಸೇಬು ಹಣ್ಣನ್ನೇ ತೆಗೆದುಕೊಳ್ಳೋಣ. ಕೆಲವರಿಗೆ ಇದರ ಸಿಪ್ಪೆ ಕೂಡಾ ನಾಲಗೆಗೆ ಹಿತ ಎನಿಸುವುದಿಲ್ಲ. ಆದ್ದರಿಂದ ಅದರ ಸಿಪ್ಪೆಯನ್ನು ಬಿಸಾಕಿ ಹಣ್ಣನ್ನು ಮಾತ್ರ ಬಾಯಿ ಚಪ್ಪರಿಸಿ ತಿನ್ತೇವೆ. ನಾವು ಸಿಪ್ಪೆ ತೆಗೆದು ಬಿಸಾಕಿದರೆ ಅದರಲ್ಲಿರುವ ಹೆಚ್ಚಿನ ವಿಟಮಿನ್ ಇ ಮತ್ತು ವಿಟಮಿನ್ ಕೆ ಜೀವಸತ್ವವನ್ನು ಮತ್ತು ಅದರಲ್ಲಿರುವ ಎಲ್ಲಾ ಫೋಲೇಟ್ಗಳನ್ನು ಕೂಡಾ ಕಿತ್ತೆಸೆದೆವೆಂದೇ ಅರ್ಥ. ಸೇಬಿನ ಸಿಪ್ಪೆಯನ್ನು ಸೇವಿಸುವುದರಿಂದ ದೇಹದಲ್ಲಿ ಕಂದು ಬಣ್ಣದ ಕೊಬ್ಬಿನ ಪ್ರಮಾಣವು ಹೆಚ್ಚಾಗಬಹುದು, ಇದರಿಂದಾಗಿ ನಾವು ಹೆಚ್ಚಿನ ಕ್ಯಾಲೊರಿಗಳನ್ನು ಸುಡುವಂತೆ ಮಾಡಿ ತೂಕವನ್ನು ಕಡಿಮೆ ಮಾಡುತ್ತದೆ.
ಸೇಬಿನ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆದರೆ ಸೇಬಿನ ಒಟ್ಟು ಫೈಬರ್ನ ಮೂರನೇ ಒಂದು ಭಾಗದಷ್ಟು ನಷ್ಟವಾಗುತ್ತದೆ. ಇದು ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಬಹುದು. ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಫೋಲೇಟ್, ಕಬ್ಬಿಣ ಮತ್ತು ರಂಜಕ ಭರಿತ ಸೇಬಿನ ಸಿಪ್ಪೆಯು ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಬಹಳ ಪರಿಣಾಮಕಾರಿಯಾಗಿದೆ. ನಾವು ಇದನ್ನು ನಿಯಮಿತವಾಗಿ ಸೇವಿಸಿದರೆ, ಇದು ಜೀರ್ಣಕ್ರಿಯೆ ಸಲೀಸಾಗಿ ನಿರ್ವಹಿಸಲು ಸಹಾಯ ಮಾಡುವುದಲ್ಲದೆ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಹೆಚ್ಚು ಬೆಂಬಲಿಸುತ್ತದೆ. ರಕ್ತದಲ್ಲಿನ ಸಕ್ಕರೆ ಅಥವಾ ಮಧುಮೇಹ ಇರುವವರು ಸಿಪ್ಪೆ ಸಹಿತ ಸೇಬನ್ನು ತಿನ್ನಬೇಕು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿ.
ಇದು ಸ್ತನ ಕ್ಯಾನ್ಸರ್ ಮತ್ತು ಇತರ ಅಂಗಾಂಗಳ ಸಂಬಂಧಿ ಕಾಣಿಸಿಕೊಳ್ಳುವ ಕ್ಯಾನ್ಸರ್ ತಡೆಗಟ್ಟುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಒಟ್ಟಿನಲ್ಲಿ ಸೇಬು ಹಣ್ಣಿನಿಂದ ಎಷ್ಟು ಪ್ರಯೋಜನವಿದೆಯೋ ಅದೇ ರೀತಿ ಸೇಬು ಹಣ್ಣಿನ ಸಿಪ್ಪೆಯಿಂದ ಕೂಡಾ ನಾವು ಆರೋಗ್ಯ ಪ್ರಯೋಜನವನ್ನು ಕಂಡುಕೊಳ್ಳಬಹುದು.

