ಬೆಳಗ್ಗಿನ ಮೂಡ್ ಚೆನ್ನಾಗಿರಲು, ದಿನಪೂರ್ತಿ ಫ್ರೆಶ್ ಆಗಿ ಇರಲು ನಾವು ಕಾಫಿ ಕುಡಿಯುತ್ತೇವೆ. ಆದ್ರೆ ಕಾಫಿ ನಮ್ಮ ಕೇಶರಾಶಿಗೂ ಒಂದು ಉತ್ತಮ ಔಷದಿಯಾಗಿ ಕೆಲಸ ಮಾಡುತ್ತದೆ. ತ್ವಚೆ ಹಾಗೂ ಕೂದಲಿನ ಸೌಂದರ್ಯ ಹೆಚ್ಚಿಸಲು ಕಾಫಿ ಒಂದು ಉತ್ತಮ ಆಯ್ಕೆ.
ಕಾಫಿಯ ಕೆಫೀನ್ ಅಂಶ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಇದು ನೆತ್ತಿಗೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಕೂದಲು ಉದುರುವಿಕೆಗೆ ಕಾರಣವಾದ ಡಿಎಚ್ ಟಿ ಎಂಬ ಹಾರ್ಮೋನ್ ನ ಪರಿಣಾಮಗಳನ್ನು ಕೆಫೀನ್ ತಡೆಯುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳಿವೆ ಇದು ಕೂದಲನ್ನು ಒಡೆಯದಂತೆ ಕೂಡಾ ಕಾಪಾಡುತ್ತದೆ.
ಕಾಫಿ ಹೇರ್ ಮಾಸ್ಕ್ ಮಾಡಿಕೊಳ್ಳುವುದು, ಕಾಫಿಯಿಂದ ತಲೆಕೂದಲು ತೊಳೆಯುವುದು, ಸ್ಕ್ರಬ್ ಗಳನ್ನು ಬಳಸುವುದರಿಂದ ಕೂದಲಿನ ಆರೋಗ್ಯವನ್ನು ಇದು ಉತ್ತೇಜಿಸುತ್ತದೆ. ಕೂದಲಿನ ಬೇರಿಗೆ ರಕ್ತಪರಿಚಲನೆಯನ್ನು ಕೂಡಾ ಹೆಚ್ಚಿಸುತ್ತದೆ. ಕಾಫಿ ಪುಡಿಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಮತ್ತು ಶಾಂಪೂ ಮಾಡುವ ಮೊದಲು ನಿಮ್ಮ ನೆತ್ತಿಯ ಭಾಗಕ್ಕೆ ನಿಧಾನವಾಗಿ ಉಜ್ಜಿಕೊಳ್ಳುವುದರಿಂದಲೂ ಉಪಯೋಗವಿದೆ.
ಕಾಫಿ ಪುಡಿ ಕೇಶರಾಶಿಗೆ ಹೇಗೆ ಉತ್ತಮವೋ ಅದೇ ರೀತಿ ಮುಖದ ಕಾಂತಿಯನ್ನು ಹೆಚ್ಚಿಸಲು ಕೂಡಾ ಅತ್ಯಂತ ಪರಿಣಾಮಕಾರಿ. ಹೊಳಪು ಮತ್ತು ಮೃದುತ್ವವನ್ನು ಹೆಚ್ಚಿಸುತ್ತದೆ. ದಪ್ಪವಾಗಿ ಬೆಳೆಯಲು ಸಹಕಾರಿ.
ಹೊಳಪು ಮತ್ತು ಮೃದುತ್ವವನ್ನು ಹೆಚ್ಚಿಸುತ್ತದೆ
ಕಾಫಿಯ ನೈಸರ್ಗಿಕ ಗುಣಲಕ್ಷಣಗಳು ಮಂದ ಕೂದಲಿಗೆ ಹೊಳಪನ್ನು ನೀಡುತ್ತವೆ, ಇದು ಆರೋಗ್ಯಕರ ಕೂದಲಿಗೆ ಕಾರಣವಾಗುತ್ತದೆ. ಹೀಗೆ ಕಾಫಿ ಪುಡಿಯಿಂದ ಅನೇಕ ರೀತಿಯ ಪ್ರಯೋಜನಗಳಿವೆ.



