ಕಾರ್ಕಳ:- ಮುಂದೂಡಲ್ಪಟ್ಟಿದ್ದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳಕ್ಕೆ ದಿನ ನಿಗದಿಯಾಗಿದೆ. ಇದೇ ಬರುವ ಮಾರ್ಚ್ ಹದಿನೈದರಂದು ಕಂಬಳ ನಡೆಯಲಿದೆ. ಕಂಬಳ ಸಮಿತಿ ವೇಳಾಪಟ್ಟಿಯಂತೆ ಈ ಕಂಬಳ ಜನವರಿಯಲ್ಲಿ ನಡೆಯಬೇಕಿತ್ತು. ಆದರೆ ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮುಂದೂಡಲ್ಪಟ್ಟಿತ್ತು.
ಮಾ.ಹದಿನೈದರಂದು ನಡೆಯಬೇಕಿದ್ದ ಬಂಗಾಡಿ ಕಂಬಳ ಕಾರಣಾಂತರಗಳಿಂದ ರದ್ದಾಗಿದೆ. ಇಲ್ಲಿ ಸ್ವಚ್ಛ ಕೆರೆ, ಕೋಣಗಳ ವಿಶ್ರಾಂತಿಗೆ ವಿಶಾಲ ಪ್ರದೇಶ, ನಿರಂತರ ನೀರು ಪೂರೈಕೆ ಮುಂತಾದ ಮೂಲಭೂತ ಸೌಕರ್ಯಗಳಿವೆ. ಸೆನ್ಸಾರ್ ಟೈಮರ್ ವ್ಯವಸ್ಥೆಯೂ ಇದೆ. ಕೋಣಗಳ ಓಟದ ವೇಗದ ಬಗ್ಗೆ ನಿಖರ ಮಾಹಿತಿ ಲಭಿಸುತ್ತದೆ.
ಕೋಣಗಳ ತರಬೇತಿ ಕೂಡಾ ಇಲ್ಲಿ ನಡೆಯುತ್ತದೆ. ವಾರಾಂತ್ಯದಲ್ಲಿ ನಲ್ವತ್ತಕ್ಕೂ ಅಧಿಕ ಜೋಡಿ ಕೋಣಗಳು ಮಿಯ್ಯಾರಿನಲ್ಲಿ ತರಬೇತಿಯನ್ನು ಪಡೆದು ಕಂಬಳ ಗದ್ದೆಯಲ್ಲಿ ಪೈಪೋಟಿಯನ್ನು ನೀಡುತ್ತದೆ.

