ಮೊನ್ನೆ ತಾನೇ ಅದ್ಧೂರಿಯಾಗಿ ಬಿಡುಗಡೆಗೊಂಡ ಛಾವಾ ಚಿತ್ರ ಈಗಾಗಲೇ ಬಹುದೊಡ್ಡ ಮೊತ್ತದ ಗಳಿಕೆಯ ಜೊತೆಗೆ ಯಶಸ್ವಿಯಾಗಿ ಓಡುತ್ತಿದೆ. ಈ ಸಿನಿಮಾದ ಕ್ರೇಜ್ ಮಾತ್ರ ಇನ್ನೂ ನಿಂತಿಲ್ಲ. ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿರುವ ಈ ಹಿಸ್ಟೋರಿಕಲ್ ಮೂವಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಒಮ್ಮೆ ನೋಡಿದ್ರೆ ಸಾಕು ಮನಸ್ಸಿನಲ್ಲಿ ಈ ಸಿನಿಮಾ ಅಚ್ಚಳಿಯದೆ ಉಳಿಯೋದಂತೂ ಗ್ಯಾರಂಟಿ. ಅದರಲ್ಲೂ ಜನರನ್ನು ಟ್ರಿಗರ್ ಮಾಡೋ ಅದ್ಭುತ ಅಂಶವೆಂದರೆ ನಟ ವಿಕ್ಕಿ ಅವರ ನಟನೆ ಮತ್ತು ಡೈಲಾಗ್. ಸಂಭಾಜಿ ಮಹಾರಾಜರ ಪಾತ್ರಕ್ಕೆ ವಿಕ್ಕಿ ಅವರು ಸಂಪೂರ್ಣ ನ್ಯಾಯವನ್ನು ಒದಗಿಸಿದ್ದಾರೆ ಎಂದೇ ಹೇಳಬಹುದು.
ಈ ಚಿತ್ರದ ಒಂದೊಂದು ಪಾತ್ರವನ್ನೂ ಮಾಡಿರುವ ನಟರು ನಟಿಯರು ಮಾತ್ರ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರೇಕ್ಷಕರ ಮನಗೆದ್ದ ವಿಚಾರವೆಂದರೆ ಸಂಭಾಷಣೆ. ಮನ ಮುಟ್ಟುವ ಸಂಭಾಷಣೆಗೆ ಪೆನ್ನು ಹಿಡಿದದ್ದು ಮಾತ್ರ ಓರ್ವ ಮುಸ್ಲಿಂ ಬರಹಗಾರ. ಅಚ್ಚರಿಯಾದರೂ ಸತ್ಯ. ಮನಕ್ಕೆ ತಲುಪುವಂತಹ ದಿ ಗ್ರೇಟ್ ಡೈಲಾಗ್ ಗಳನ್ನು ಈ ಸಿನಿಮಾದಲ್ಲಿ ಹೆಣೆದದ್ದು ಇರ್ಷಾದ್ ಕಾಮಿಲ್. ಇವರು ಬರೆದಿರುವ ಸಂಭಾಷಣೆಗೆ ಮಾತ್ರ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ಈ ಸಿನಿಮಾದ ಸಂಭಾಷಣೆ ಬರೆಯಲು ನಾನು ಯಾವುದೇ ರೀತಿಯಲ್ಲಿ ಒಂದು ರೂಪಾಯಿ ಸಂಭಾವನೆಯನ್ನೂ ಪಡೆದಿಲ್ಲ. ಸಂಭಾಜಿ ಮಹಾರಾಜ್ ನನಗೆ ಕೇವಲ ಇತಿಹಾಸದಲ್ಲಿ ಬಂದು ಹೋದ ವ್ಯಕ್ತಿ ಮಾತ್ರವಲ್ಲ. ಆದರ್ಶವೂ ಹೌದು ಎಂದು ಹೇಳಿದ್ದಾರೆ.


