ಮಂಗಳೂರು: ತುಳು ಚಿತ್ರರಂಗದಲ್ಲಿ ತನ್ನ ನಟನೆ ಮತ್ತು ಹಾಸ್ಯದ ಮುಖೇನ ಅಭಿಮಾನಿಗಳನ್ನು ಸಂಪಾದಿಸಿದ್ದ ಕಲಾವಿದ ವಿವೇಕ್ ಮಾಡೂರು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ತನ್ನ ಕುಬ್ಜ ದೇಹದಿಂದಲೇ ಸಿನಿಪ್ರಿಯರನ್ನು ಮನರಂಜಿಸುತ್ತಿದ್ದ ಇವರು ರಾತ್ರಿ ಮನೆಯ ಶೌಚಾಲಯದಲ್ಲಿ ಏಕಾಏಕಿ ಬಿದ್ದಿದ್ದಾರೆ. ನಂತರ ವಿಶ್ರಾಂತಿಗಾಗಿ ನಿದ್ದೆಗೆ ಜಾರಿದ್ದು ಮುಂಜಾನೆ ಮನೆಯವರು ಎಬ್ಬಿಸಲು ಹೋದಾಗ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಿವೇಕ್ ಮಾಡೂರು ಅವರು ಅಣ್ಣನ ದಿನಸಿ ಅಂಗಡಿಯಲ್ಲಿ ಮನೆ ಬಳಕೆಯ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ವೃತ್ತಿಪರ ಹಾಸ್ಯ ಕಲಾವಿದರಾಗಿದ್ದ ಇವರ ನಿಧನಕ್ಕೆ ಕೋಸ್ಟಲ್ ವುಡ್ ಕಲಾವಿದರು, ತುಳು ರಂಗಭೂಮಿ ಸಂತಾಪ ವ್ಯಕ್ತಪಡಿಸಿದ್ದಾರೆ.


