ಕಾರ್ಕಳ : ಕಾರ್ಕಳ ತಾಲೂಕಿನ ರಂಗನಪಲ್ಕೆ ಎಳಿಯಾಳ ಪದವು ಸರಕಾರಿ ಪ್ರಾಥಮಿಕ ಶಾಲಾ ಸಮೀಪ ರಸ್ತೆ ಬದಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಮಾ.17ರಂದು ನಡೆದಿದೆ.
ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಸುತ್ತಲಿನ ಗಿಡಗಂಟಿಗಳು ಸುಟ್ಟು ಹೋಗಿದೆ. ಮಾ.16ರ ರಾತ್ರಿ ಇಲ್ಲಿ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯರೆಲ್ಲಾ ಬೆಂಕಿ ನಂದಿಸಿದ್ದರು. ಆದರೆ ಸೋಮವಾರ ಬೆಳಿಗ್ಗೆ ಮತ್ತೆ ಬೆಂಕಿ ಹತ್ತಿಕೊಂಡಿದ್ದು, ಬದಿಯಲ್ಲಿರುವ ಶಾಲಾ ಕಂಪೌಂಡ್ನ ಒಳಗೂ ಬೆಂಕಿ ಆವರಿಸಿಕೊಂಡಿದೆ.

ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸ್ಥಳೀಯರಾದ ಯೋಗೀಶ್ ಪೂಜಾರಿ, ಪ್ರವೀಣ್ ಹಾಗೂ ಪ್ರಜ್ವಲ್ ಸೇರಿದಂತೆ ಇತರರು ಸಹಕರಿಸಿದ್ದಾರೆ.
ಮೆಸ್ಕಾಂ ಇಲಾಖಾ ಸಿಬ್ಬಂದಿಯೂ ತಕ್ಷಣವೇ ಸ್ಪಂದಿಸಿದ್ದು ಸ್ಥಳದಲ್ಲಿ ಹಾದು ಹೋಗುವ ವಿದ್ಯುತ್ ತಂತಿಯ ನಿರ್ವಹಣೆಯಲ್ಲಿ ತೊಡಗಿದ್ದಾರೆ.


