ವಾಷಿಂಗ್ಟನ್: ಒಂಭತ್ತು ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕೊನೆಗೂ ಸೇಫ್ ಆಗಿ ಭೂಮಿ ತಲುಪಿದ್ದಾರೆ.
ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು ಹೊತ್ತಿಕೊಂಡು ಬಂದಿತ್ತು. ನಿರಂತರ ಹದಿನೇಳು ಗಂಟೆಗಳ ಬಳಿಕ ಭಾರತೀಯ ಕಾಲಮಾನ ಇಂದು ನಸುಕಿನ ಜಾವ ಮೂರು ಇಪ್ಪತ್ತೇಳರ ಸಮಯಕ್ಕೆ ಅಮೇರಿಕಾದ ಫ್ಲೋರಿಡಾ ಸಾಗರದಲ್ಲಿ ಲ್ಯಾಂಡ್ ಆಗಿದೆ.
ಸುನಿತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ಹೆಚ್ಚು ಸಮಯ ಕಳೆದ ಮಹಿಳೆ ಎಂಬ ಹೊಸ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಸುನಿತಾ ವಿಲಿಯಮ್ಸ್ ಮತ್ತು ತಂಡ ಸಂಶೋಧನೆಗಾಗಿ ಒಂದು ವಾರದ ಮಟ್ಟಿಗೆ ಬಾಹ್ಯಾಕಾಶಕ್ಕೆ ತೆರಳಿದ್ದರು.ಆದರೆ ತಾಂತ್ರಿಕ ಸಮಸ್ಯೆಯಿಂದ ವಾಪಸ್ಸು ಬರಲಾಗದೆ ಒಂಭತ್ತು ತಿಂಗಳುಗಳ ಕಾಲ ಅಂದರೆ ಬರೋಬ್ಬರಿ ಒಂಭೈನೂರು ಗಂಟೆ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ.

