ಕಣ್ಣೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಬಿಡುಗಡೆಗೊಂಡಿರುವ ನಟ ದರ್ಶನ್ ಅವರು ಈಗ ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದೀಗ ಅವರು ತನ್ನ ಕುಟುಂಬದೊಂದಿಗೆ ಇಂದು ಶನಿವಾರ ಕೇರಳದ ಕಣ್ಣೂರಿನ ಮಾಡಾಯಿಕಾವು ದೇಗುಲಕ್ಕೆ ಭೇಟಿ ನೀಡಿದ್ದಾರೆ.
ದರ್ಶನ್ ಅವರು ಅವರ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಹಾಗೂ ಗೆಳೆಯ ನಟ ಧನ್ವೀರ್ ಜೊತೆ ಮಾಡಾಯಿಕಾವು ದೇವಸ್ಥಾನಕ್ಕೆ ಆಗಮಿಸಿದ ದರ್ಶನ್ ದೇವರ ದರ್ಶನ ಮಾಡಿ ವಿಶೇಷವಾದ ಪೂಜೆಯನ್ನು ಸಲ್ಲಿಸಿದ್ದಾರೆ.
ನಟನನ್ನು ದೇಗುಲದ ವತಿಯಿಂದ ಗೌರವಿಸಲಾಯಿತು. ಇತ್ತೀಚೆಗೆ ನಟ ದರ್ಶನ್ ಅವರು ಮೈಸೂರಿನಲ್ಲಿ ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

