ಮಂಗಳೂರು: ಮಂಗಳೂರು ಮತ್ತು ಮುಂಬೈ ನಡುವಿನ ರೈಲ್ವೇ ಸಂಚಾರಕ್ಕೆ ತೀವ್ರ ಅವಧಿ ಬೇಕಾಗುತ್ತದೆ. ಈ ಹಿನ್ನೆಲೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂದು ಪ್ರಯಾಣಿಕರ ಬಹುಕಾಲದ ಬೇಡಿಕೆಯಿತ್ತು. ಇದೀಗ ರೈಲ್ವೇ ಇಲಾಖೆ ಈ ಬಗ್ಗೆ ಚಿಂತನೆ ನಡೆಸಿದೆ.
ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ ಪ್ರಯಾಣದ ಅವಧಿ ಹನ್ನೆರಡು ಗಂಟೆ ಎಂದು ಅಂದಾಜು ಮಾಡಲಾಗಿದೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ಮನವಿಯ ಮೇರೆಗೆ ರೈಲ್ವೇ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಯೋಜನೆ ಹಾಕುತ್ತಿದೆ.
ಈಗ ಮಂಗಳೂರು-ಗೋವಾ ಸಂಚಾರ ಮಾಡುವ ರೈಲಿನಲ್ಲಿ ಶೇಕಡ ಎಪ್ಪತ್ತರಷ್ಟು ಸೀಟುಗಳು ಮಾತ್ರ ಭರ್ತಿಯಾಗುತ್ತಿದೆ. ವಂದೇ ಭಾರತ್ ರೈಲು ಆರಂಭವಾದರೆ ಎಲ್ಲಾ ಸೀಟುಗಳು ಭರ್ತಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

