ಕಾರ್ಕಳ: ನಿನ್ನೆ ಸುರಿದ ಧಾರಾಕಾರ ಗಾಳಿ ಮಳೆಗೆ ಕಾರ್ಕಳದ ಹಲವು ಕಡೆ ಮರಗಳು ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.
ಪೆರುವಾಜೆ ರಸ್ತೆಯಲ್ಲಿ ಎಚ್ ಪಿ ಗ್ಯಾಸ್ ಅಫೀಸ್ ಸಮೀಪ ಮರ ಉರುಳಿ ಬಿದ್ದು ಎರಡು ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ.
ಪೆರುವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕೂಡಾ ಬೃಹತ್ ಮರ ರಸ್ತೆಗುರುಳಿ ಒಂದೆರಡು ವಿದ್ಯುತ್ ಕಂಬಗಳು ಬಿದ್ದಿವೆ. ಕಾರ್ಕಳ ಪೇಟೆಯಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು.
ಕೆಲವು ದಿನಗಳಿಂದ ಉರಿ ಬಿಸಿಲಿನ ತಾಪದಿಂದ ಬಸವಳಿದಿದ್ದ ಜನರಿಗೆ ಮಳೆರಾಯನ ಕೃಪೆಯಿಂದ ಸ್ವಲ್ಪ ಮುಕ್ತಿ ಸಿಕ್ಕಿದೆ. ಧರೆ ಕೂಡಾ ತಂಪಾಗಿದೆ.

