ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಹದಿನೆಂಟು ಈಗಾಗಲೇ ಶುರುವಾಗಿದ್ದು ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಐದು ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದೆ. ಆದರೆ ಇಂಪ್ಯಾಕ್ಟ್ ನಿಯಮದ ಚರ್ಚೆಗಳು ಮಾತ್ರ ಕೊನೆಯಾಗುತ್ತಿಲ್ಲ. ಇದೀಗ ಈ ಚರ್ಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಎಂಟ್ರಿ ಕೊಟ್ಟಿದ್ದು ಈ ನಿಯಮದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಎಂ.ಎಸ್ ಧೋನಿ ಅವರು ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಗತ್ಯವಿಲ್ಲ ಎಂಬುದು ನನ್ನ ಅನಿಸಿಕೆ. ಏಕೆಂದರೆ ಆಟಗಾರನು ಇಡೀ ಪಂದ್ಯದಲ್ಲಿ ಭಾಗಿಯಾಗಬೇಕು. ಆದರೆ ಹೊಸ ನಿಯಮವು ಇಡೀ ಪಂದ್ಯದ ರಿಸಲ್ಟ್ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.
ಧೋನಿ ಸೇರಿದಂತೆ ಅನೇಕ ಫೇಮಸ್ ಆಟಗಾರರು ಈ ನಿಯಮವನ್ನು ಟೀಕಿಸಿದ್ದರು. ಅದೇ ರೀತಿಯಲ್ಲಿ ಧೋನಿ ಕೂಡಾ ಮಾತನಾಡಿ ಒಂದು ರೀತಿಯಲ್ಲಿ, ಇಂತಹ ನಿಯಮ ನನ್ನಂತಹ ಹಿರಿಯ ಆಟಗಾರರಿಗೆ ಸಹಾಯ ಮಾಡುತ್ತದೆ. ಆದರೆ ನಾನು ವಿಕೆಟ್ ಕೀಪರ್. ಹೀಗಾಗಿ ನಾನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಲು ಆಗುವುದಿಲ್ಲ ಎಂದು ಮುಕ್ತವಾಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.


