ಉಡುಪಿ: ಕ್ಯಾಲೆಂಡರ್ ಪ್ರಕಾರ ಜನವರಿ ಹೊಸ ವರ್ಷ ಆದರೆ ಹಿಂದೂ ಧರ್ಮದ ಪ್ರಕಾರ ಯುಗಾದಿಯನ್ನು ಹೊಸ ವರ್ಷವೆಂದು ಕರೆಯಲಾಗುತ್ತದೆ. ನಾಳೆ ರಾಜ್ಯದಲ್ಲಿ, ಕರಾವಳಿಯಾದ್ಯಂತ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಕೋಟೇಶ್ವರದ ಹಳೆ ಅಳಿವೆ ಕಡಲ ತೀರದಲ್ಲಿ ಮರಳು ಶಿಲ್ಪವನ್ನು ರಚಿಸಲಾಗಿದೆ.
ಈ ಬಾರಿಯ ಚಾಂದ್ರಮಾನ ಯುಗಾದಿ ಎಲ್ಲರಿಗೂ ಒಳಿತನ್ನೇ ಮಾಡಲಿ ಎಂಬ ಧ್ಯೇಯದೊಂದಿಗೆ ಶುಭಾಶಯ ಸಾರುವ ನಿಟ್ಟಿನಲ್ಲಿ ಸ್ಯಾಂಡ್ ಥೀಂ ಉಡುಪಿ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಈ ಮರಳು ಕಲಾಕೃತಿಯನ್ನು ರಚಿಸಿದ್ದಾರೆ.
ಮರಳು ಶಿಲ್ಪದಲ್ಲಿ ಯುಗಾದಿ ಪರಿಕಲ್ಪನೆ ಸುಂದರವಾಗಿ ಮೂಡಿಬಂದಿದೆ. ಆಕರ್ಷಣೀಯ ಈ ಕಲಾಕೃತಿಗೆ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ.

