ನಾವು ದಿನನಿತ್ಯ ಬೆಳಿಗೆದ್ದು ಚಹಾ ಕುಡಿಯುವುದನ್ನು ರೂಢಿ ಮಾಡಿಕೊಂಡಿರುತ್ತೇವೆ. ಕೆಲವರಿಗಂತೂ ಯಾವುದೇ ಕಾರಣಕ್ಕೂ ಟೀ ಮಿಸ್ ಆಗಲೇ ಬಾರದು. ದಿನವಿಡೀ ರಿಫ್ರೆಶ್ ಆಗಿರಬೇಕಾದರೆ ಚಹಾ ಕುಡಿಯಲೇಬೇಕು. ಆದರೆ ಪ್ರತೀದಿನ ಹಾಲಿನ ಚಹಾ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.
ಹಾಲಿನ ಚಹಾದ ಅತಿಯಾದ ಸೇವನೆಯು ದೇಹಕ್ಕೆ ಹಾನಿಕಾರಕವಾಗಬಹುದು. ನಿದ್ರಾಹೀನತೆ ಮತ್ತು ಕೊಲೆಸ್ಟ್ರಾಲ್ ನಂತಹ ಸಮಸ್ಯೆ ಕೂಡಾ ಕಂಡುಬರುತ್ತದೆ. ಚಹಾದಲ್ಲಿ ಕೆಫೀನ್ ಎನ್ನುವಂತಹ ಅಂಶ ಇರುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ವೇಗವಾಗಿ ಹೆಚ್ಚಾಗಲು ಇದು ಕಾರಣವಾಗುತ್ತದೆ. ರಕ್ತದೊತ್ತಡವನ್ನು ಕೂಡಾ ಹೆಚ್ಚು ಮಾಡುತ್ತದೆ.
ಹೆಚ್ಚು ಚಹಾ ಕುಡಿಯುವ ಅಭ್ಯಾಸವಿದ್ದರೆ ಅದನ್ನು ಬಿಡೋದೇ ಒಳಿತು. ಕಪ್ಪು ಚಹಾ ಅಥವಾ ಕಪ್ಪು ಕಾಫಿ ಕುಡಿಯುವುದರಿಂದ ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ. ಹಾಲಿನಲ್ಲಿ ಕೊಬ್ಬಿನಾಂಶ ಕೂಡಾ ಇರುವುದರಿಂದ ದೇಹದಲ್ಲಿ ಬೊಜ್ಜು ಬೆಳೆಯಲು ಕೂಡಾ ಕಾರಣವಾಗುತ್ತದೆ. ಆದ್ದರಿಂದ ಮಿತಿಯಲ್ಲಿ, ದಿನಕ್ಕೆ ಒಂದು ಬಾರಿ ಚಹಾ ಕುಡಿಯುವುದಷ್ಟೇ ಒಳ್ಳೆಯದು.

