ಉಡುಪಿ: ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಕರಾವಳಿಗರಿಗೆ ವರುಣ ಕೊನೆಗೂ ತಂಪೆರೆದಿದ್ದಾನೆ. ಬಿಸಿಲ ಬೇಗೆಯಿಂದ ಬಸವಳಿದಿದ್ದ ಭೂಮಿಯೂ ತಂಪಾಗಿದೆ. ಉಡುಪಿ, ಕಾಪು, ಕಾರ್ಕಳದ ಕಡೆ ತುಂತುರು ಮಳೆಯಾಗಿದ್ದು ಸುಳ್ಯ, ಪುತ್ತೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ.
ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನ ಇದ್ದಕಿದ್ದಂತೆ ಮಳೆ ಸುರಿದಿದೆ. ಕಡುಬಿಸಿಲಿನಲ್ಲಿ ಜನ ಹೊರಗೆ ಬರಲು ಇಷ್ಟವಾಗದ ವಾತಾವರಣ ಏರ್ಪಟ್ಟಿತ್ತು. ಇದೀಗ ಭೂಮಿ ತಂಪಾಗಿದೆ.
ಮುಂದಿನ ನಾಲ್ಕೈದು ದಿನ ಮಳೆ ಬರುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


