ಸುರತ್ಕಲ್: ಸುರತ್ಕಲ್ ರೈಲು ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ಮುಂಬಯಿ ಕಡೆಗೆ ಹೋಗುತ್ತಿದ್ದ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ಹತ್ತುವ ಸಂದರ್ಭ ಆಯತಪ್ಪಿ ಬೀಳುತ್ತಿದ್ದ ಹಿರಿಯ ಪ್ರಯಾಣಿಕರೋರ್ವರನ್ನು ನಿಲ್ದಾಣದ ಸ್ಟೇಷನ್ ಮಾಸ್ಟರ್ ಮನೋಜ್ ಶೆಟ್ಟಿ ಹಾಗೂ ಪಾಯಿಂಟ್ಸ್ಮೆನ್ ಜಗದೀಶ್ ರಕ್ಷಿಸಿದ್ದಾರೆ.

ಪ್ರಯಾಣಿಕರನ್ನು ರಕ್ಷಿಸಿದ ಈ ಇಬ್ಬರು ಸಿಬಂದಿಗೆ ಕೊಂಕಣ ರೈಲ್ವೆ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರು ತಲಾ 5 ಸಾ. ರೂ. ಬಹುಮಾನ ಪ್ರಕಟಿಸಿದ್ದಾರೆ.

