ಬ್ರಹ್ಮಾವರ ಸಮೀಪದ ರಾಷ್ಟೀಯ ಹೆದ್ದಾರಿ 66 ರ ಮಾಬುಕಳ ಸೇತುವೆ ಸಮೀಪ ನಡೆದ ಭೀಕರ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ನಿನ್ನೆ ಸಂಜೆ ಮಾಬುಕಳ ಸೇತುವೆ ಸಮೀಪ ಸ್ಕೂಟರ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಮಹಿಳೆಯ ದೇಹ ಛಿದ್ರ ಛಿದ್ರವಾಗಿದ್ದು ಭಯಾನಕವಾಗಿತ್ತು.

ಅಪಘಾತದಲ್ಲಿ ಸಹ ಸವಾರೆ ಬಾರ್ಕೂರು ಉದ್ದಾಲಗುಡ್ಡೆಯ ಪೂರ್ಣಿಮಾ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ನಡೆದ ತಕ್ಷಣ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

