ಮಂಗಳೂರು: ಕಾಂತಾರ ಚಿತ್ರದ ಮುಖೇನ ಸಿನಿಮಾ ರಂಗದಲ್ಲಿ ಇಡೀ ದೇಶದಲ್ಲೇ ಸಂಚಲನಗೊಳಿಸಿದ ಡಿವೈನ್ ಸ್ಟಾರ್ ನಟ ರಿಷಬ್ ಶೆಟ್ಟಿ ಅವರು ಕಾಂತಾರ-೧ರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯದಲ್ಲೇ ಮೊನ್ನೆ ತಾನೇ ಕರಾವಳಿಯ ಪ್ರಸಿದ್ಧ ಕ್ಷೇತ್ರಗಳಿಗೆ ಕುಟುಂಬ ಸಮೇತ ಭೇಟಿ ನೀಡಿದ್ದರು ಕೂಡಾ. ಇದೀಗ ಅವರು ಮಂಗಳೂರಿನಲ್ಲಿ ನಡೆದ ದೈವದ ನೇನದಲ್ಲಿ ಪಾಲ್ಗೊಂಡಿದ್ದು ದೈವ ಅವರಿಗೆ ಎಚ್ಚರಿಕೆ ನೀಡಿದೆ.
ಮಂಗಳೂರಿನ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ನೇಮೋತ್ಸವದಲ್ಲಿ ಅವರು ಪಾಲ್ಗೊಂಡಿದ್ದು ದೈವ ಅವರಿಗೆ `ಜಗತ್ತಲ್ಲಿ ನಿನಗೆ ಶತ್ರುಗಳೇ ತುಂಬಿದ್ದಾರೆ. ನಿನ್ನ ಕುಟುಂಬ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಂಬಿದ ದೈವ ಕೈ ಬಿಡುವುದಿಲ್ಲ. ನನಗೆ ಸೇವೆ ನೀಡುವ ಹರಕೆ ಹೇಳಿಕೋ. ಐದು ತಿಂಗಳೊಳಗೆ ಸರಿ ಮಾಡುತ್ತೇನೆ ಎಂದು ಅಭಯ ನೀಡಿದೆ.
ಪತ್ನಿ ಮತ್ತು ಮಕ್ಕಳೊಂದಿಗೆ ರಾತ್ರಿಯಿಂದ ಬೆಳಗ್ಗಿನವರೆಗೆ ನಟ ರಿಷಬ್ ಶೆಟ್ಟಿ ಅವರು ದೈವದ ಕೋಲವನ್ನು ಕಣ್ತುಂಬಿಸಿಕೊಂಡಿದ್ದಾರೆ.

