ಬೆಳ್ತಂಗಡಿ: ಚಾಲಕನ ಕಂಟ್ರೋಲ್ ತಪ್ಪಿ ಕಾರೊಂದು ಹೊಂಡಕ್ಕೆ ಬಿದ್ದಿದ್ದು ಮಹಿಳೆಯೋರ್ವರು ಗಾಯಗೊಂಡಿರುವ ಘಟನೆ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಮುಂಡಾಜೆ ಗ್ರಾಮದ ಸೀಟು ಸಮೀಪ ನಡೆದಿದೆ.
ಕಾಲೇಜೊಂದರ ದಾಖಲಾತಿಗಾಗಿ ಆಗಮಿಸಿದ್ದ ಸಕಲೇಶಪುರ ಮೂಲದ ಪ್ರಯಾಣಿಕರಿದ್ದ ಕಾರು ಡ್ರೈವರ್ ನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ರಸ್ತೆಯ ಬದಿ ಹೊಂಡಕ್ಕೆ ಉರುಳಿದೆ.
ಕಾರಿನಲ್ಲಿದ್ದ ಓರ್ವ ಮಹಿಳೆಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

