ಪುಟ್ಟ ಮಗುವಿನಿಂದ ಹಿಡಿದು ಪ್ರತಿಯೊಬ್ಬರಿಗೂ ಸೋಷಿಯಲ್ ಮೀಡಿಯಾ ಗೀಳು ಹತ್ತಿಕೊಂಡಿದೆ. ಅದೊಂದು ಥರಾ ಚಟವಾಗಿ ಬಿಟ್ಟಿದೆ. ತಮ್ಮ ಪ್ರಾಯದಲ್ಲಿ ಆಟ, ಚಟುವಟಿಕೆಗಳಲ್ಲಿ ಭಾಗಿಯಾಗಬೇಕಾದ ಮಕ್ಕಳು ಸೋಷಿಯಲ್ ಮೀಡಿಯಾ ನೋಡೋದ್ರಲ್ಲೇ ಬ್ಯುಸಿಯಾಗಿ ಬಿಟ್ಟಿದ್ದಾರೆ. ಅದಕ್ಕಾಗಿ ಇದೀಗ ಹೊಸ ರೂಲ್ಸ್ ಬಂದಿದ್ದು ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ.
ಇನ್ಸ್ಟಾಗ್ರಾಂ ನಿಯಮದ ಪ್ರಕಾರ ಹದಿನಾರು ವರ್ಷದೊಳಗಿನ ಮಕ್ಕಳು ಇನ್ಮುಂದೆ ಪೋಷಕರ ಅನುಮತಿ ಇಲ್ಲದೆ ಲೈವ್ ಸ್ಟ್ರೀಮ್ ಮಾಡಲು ಅವಕಾಶ ಇರುವುದಿಲ್ಲ. ಮಕ್ಕಳ ಸುರಕ್ಷತೆ ಮತ್ತು ಆನ್ಲೈನ್ ಗೌಪ್ಯತೆಯನ್ನು ರಕ್ಷಿಸುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ. ಯುವ ಪೀಳಿಗೆಯ ಸುರಕ್ಷತೆಗೆ ಹೆಚ್ಚು ಒತ್ತು ನೀಡುವುದೇ ನಮ್ಮ ಧ್ಯೇಯ ಎಂದು ಇನ್ಸ್ಟಾಗ್ರಾಂ ಹೇಳಿದೆ.
ಹದಿನಾರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರು ಇನ್ಸ್ಟ್ರಾ ಬಳಕೆ ಮಾಡುವ ಮೊದಲು ಹೆತ್ತವರಿಂದ ಲಿಖಿತ ರೂಪದಲ್ಲಿ ಅನುಮತಿ ಪಡೆಯಬೇಕು. ಅದನ್ನು ಇನ್ಸ್ಟಾಗ್ರಾಂಗೆ ಸಲ್ಲಿಸಿದ ನಂತರವೇ ಬಳಕೆಗೆ ಅವಕಾಶ. ಈ ನಿಯಮದಿಂದ ಮಕ್ಕಳು ಅನುಚಿತ ವೀಡಿಯೋ ವೀಕ್ಷಿಸುವುದು ಕಡಿಮೆಯಾಗಲಿದೆ.


