ಕಾರ್ಕಳ: ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ಪುತ್ರಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 97 ಅಂಕದ ಜೊತೆಗೆ ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಈ ಸಂತೋಷವನ್ನು ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಮಗಳೇ ಓದಿಯಾಯ್ತ ಎಂದು ಪ್ರಶ್ನೆ ಮಾಡಿದಾಗಲೆಲ್ಲ ಒಳ್ಳೆ ಮಾರ್ಕ್ಸ್ ತೆಗೆದ್ರೆ ಆಯ್ತಲ್ವಾ..ಈಗ ಕಿರಿಕಿರಿ ಮಾಡ್ಬೇಡಿ ಎಂದು ಹುಸಿಗೋಪ ಪ್ರದರ್ಶಿಸುತ್ತಿದ್ದ ನನ್ನ ಮುದ್ದಿನ ಮಗಳು ಪ್ರೇರಣಾ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.97 ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ. ಅಂಕ ಗಳಿಕೆಯ ಒತ್ತಡವನ್ನು ನಾನು ಮಗಳ ಮೇಲೆ ಯಾವತ್ತೂ ಹೇರಲಿಲ್ಲ. ಅವಳೇ ಅವಳ ಜವಾಬ್ದಾರಿಯನ್ನು ಅರಿತು ಓದಿದಳು.
ಜ್ಞಾನಸುಧಾದ ಉಪನ್ಯಾಸಕರ ಮಾರ್ಗದರ್ಶನವನ್ನು ಕೂಡಾ ಈ ಸಂದರ್ಭ ಸ್ಮರಿಸಲೇಬೇಕು. ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎಂಬ ಬೇಸರ ಅವಳಿಗಿದ್ದರೂ ತಂದೆಯಾಗಿ ಮಗಳ ಸಾಧನೆ ನನಗೆ ಖುಷಿ ತಂದಿದೆ. ಮತ್ತೊಮ್ಮೆ ಅಭಿನಂದನೆ ಮಗಳೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ.

