ನವದೆಹಲಿ : ಭಾರತದಲ್ಲಿ ಯುಪಿಐ ಸೇವೆಗಳು ಇಂದು ತೀವ್ರವಾಗಿ ಅಸ್ತವ್ಯಸ್ತಗೊಂಡಿದ್ದು, ಬಳಕೆದಾರರು ಡಿಜಿಟಲ್ ಹಣಕಾಸು ವಹಿವಾಟುಗಳನ್ನು ಮಾಡಲು ಸಾಧ್ಯವಾಗದೆ ಪರದಾಡಿದ್ದಾರೆ. ಈ ಬಗ್ಗೆ ದೂರುಗಳು ಕೂಡಾ ಕೇಳಿಬಂದಿದೆ.
ಕಳೆದೊಂದು ತಿಂಗಳೊಳಗೆ ಮೂರನೇ ಬಾರಿಗೆ ಯುಪಿಐ ಡೌನ್ ಆಗಿದೆ. ದೇಶಾದ್ಯಂತ ವ್ಯವಹಾರಗಳಿಗೆ ಅಡಚಣೆ ಎದುರಾಗಿದ್ದು, ಸುಗಮ ಹಣ ವರ್ಗಾವಣೆಗಾಗಿ ಪ್ರಮುಖ ದೈನಂದಿನ ಸೇವೆಯನ್ನು ಅಡ್ಡಿಯಾಗಿದೆ.
ಎನ್ ಪಿಸಿಐ ಈ ಬಗ್ಗೆ ಪ್ರಸ್ತುತ ಮಧ್ಯಂತರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ, ಇದು ಭಾಗಶಃ ಯುಪಿಐ ವಹಿವಾಟು ನಿರಾಕರಣೆಗೆ ಕಾರಣವಾಗಿದೆ. ಸಮಸ್ಯೆಯನ್ನು ಪರಿಹರಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ” ಎಂದು ಹೇಳಿದೆ.
ಕಳೆದ ಮಾರ್ಚ್ 26 ಮತ್ತು ಏಪ್ರಿಲ್ 2ರಂದು ಇದೇ ರೀತಿಯ ಯುಪಿಐ ಡೌನ್ ಆಗಿತ್ತು. ಜನರು ವಹಿವಾಟು ಮಾಡಲು ಪರದಾಡಿದ್ದಾರೆ.

