ಹೆಬ್ರಿ: ಹೆಬ್ರಿಯ ಎಸ್.ಕೆ ಫರ್ನಿಚರ್ ಉದ್ಯಮ ಸಮೂಹದ ಅಂಗ ಸಂಸ್ಥೆಯಾದ ಹೆಬ್ರಿ ಕುಚ್ಚೂರು ರಸ್ತೆಯಲ್ಲಿರುವ ಎಸ್.ಕೆ. ಎಂಟರ್ ಪ್ರೈಸಸ್ ಸಂಸ್ಥೆಯಲ್ಲಿ ಇದ್ದಕಿದ್ದಂತೆ ಶಾರ್ಟ್ ಸರ್ಕೂಟ್ ಆಗಿದ್ದು ಇದರ ಪರಿಣಾಮವಾಗಿ ಬೆಂಕಿ ತಗುಲಿ ಸುಮಾರು 15 ಲಕ್ಷಕ್ಕೂ ಅಧಿಕ ನಷ್ಟವಾದ ಘಟನೆ ನಿನ್ನೆ ನಡೆದಿದೆ.
ಪೈಪ್, ಕಮಾಡೋ, ಕಟ್ಟಡ ಸಾಮಾಗ್ರಿಗಳು, ಫಿಟ್ಟಿಂಗ್ಸ್ ವಸ್ತುಗಳು, ಗ್ರಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಸ್ಥಳೀಯರು ಒಟ್ಟು ಸೇರಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.
ಹೆಬ್ರಿ ಸಬ್ ಇನ್ಸ್ ಫೆಕ್ಟರ್ ಮಹೇಶ್ ಟಿ.ಎಂ. ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಅಧಿಕ ಮೊತ್ತದ ನಷ್ಟ ಉಂಟಾಗಿದೆ.

