ಮಂಗಳೂರು : ಬೋಂದೆಲ್ ಜಂಕ್ಷನ್ನಲ್ಲಿ ಹತ್ತು ದಿನಗಳ ಹಿಂದೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉದ್ಯಮಿ ಎಂ. ರಾಜೇಶ್ ಬಾಬು (67) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.
ಜಂಕ್ಷನ್ನಲ್ಲಿ ನಿಂತಿದ್ದ ಖಾಸಗಿ ಬಸ್ಗೆ ರಾಜೇಶ್ ಬಾಬು ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು. ಕಾರು ನಜ್ಜುಗುಜ್ಜಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ರಾಜೇಶ್ ಬಾಬು ಅವರು ಕೇರಳದ ತಲಶ್ಶೇರಿ ಮೂಲದವರಾಗಿದ್ದು, ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದರು. ಬಂದರಿನ ಬಾಂಬೆ ಟೈರ್ನ ಪಾಲುದಾರರಾಗಿ ಮತ್ತು ನ್ಯೂ ಬಾಂಬೆ ಟೈರ್ನ ಮಾಲಕರಾಗಿದ್ದರು. ರೋಟರಿ ಕ್ಲಬ್ ಮತ್ತು ಕೇರಳ ಸಮಾಜಂ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

