ಸುಬ್ರಹ್ಮಣ್ಯ: ರಾಜ್ಯದಲ್ಲಿ ಅತ್ಯಂತ ಶ್ರೀಮಂತ ದೇಗುಲವಾಗಿರುವ ದ.ಕ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವಾರ್ಷಿಕ ಆದಾಯದಲ್ಲಿ ಮತ್ತೊಮ್ಮೆ ನಂಬರ್ ವನ್ ಎನಿಸಿಕೊಂಡಿದೆ. ಹೌದು. ಈ ಬಾರಿ ದೇಗುಲದ ವಾರ್ಷಿಕ ಆದಾಯ ಕಳೆದ ಬಾರಿಗಿಂತಲೂ ಒಂಭತ್ತು ಕೋಟಿ ಅಧಿಕವಾಗಿದೆ.
ದತ್ತಿ ಇಲಾಖೆಯಡಿ ಬರುವ ಈ ದೇಗುಲವು ನಾಗಾರಾಧನೆ ಮತ್ತು ಕಾರ್ಣಿಕ ಶಕ್ತಿಯಿಂದ ಪ್ರಸಿದ್ಧಿಯನ್ನು ಪಡೆದಿದೆ. ಕಳೆದ ವರ್ಷವೂ ದೇಗುಲದ ಆದಾಯ ಪ್ರಥಮ ಸ್ಥಾನದಲ್ಲಿತ್ತು. ಈ ವರ್ಷವೂ ಅತ್ಯಧಿಕ ಆದಾಯ ಸಂಗ್ರಹದ ಕ್ಷೇತ್ರವಾಗಿ ಖ್ಯಾತಿ ಪಡೆದಿದೆ.
ಸರ್ಪ ಸಂಸ್ಕಾರ ಸೇರಿದಂತೆ ಇತರ ಸೇವೆಗಳು ಕೂಡಾ ಇಲ್ಲಿ ಆದಾಯದ ಒಂದು ಭಾಗವಾಗಿದೆ. ವರ್ಷದಿಂದ ವರ್ಷಕ್ಕೆ ದೇಗುಲದ ಆದಾಯ ಹೆಚ್ಚುತ್ತಿದ್ದು ಈ ಬಾರಿ ಒಂಭತ್ತು ಕೋಟಿ ಹೆಚ್ಚಾಗಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

