ಕಳೆದ ವರ್ಷ ಮಳೆಗಾಲಕ್ಕೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ಆದರೆ ಈ ವರ್ಷ ಕಳೆದ ಬಾರಿಗಿಂತ ಉತ್ತಮವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುಂಚಿತವಾಗಿ ಸೂಚನೆಯನ್ನು ನೀಡಿದೆ.
ಈಗೀಗ ನೆತ್ತಿ ಸುಡುವ ಬಿಸಿಲಿದ್ದರೂ ಕೂಡಾ ಎಪ್ರಿಲ್ ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ರಾಜ್ಯದ ಬಹುತೇಕ ಭಾಗಗಳಲ್ಲಿ ಸುರಿಯಲಿದೆ. ಮೇ ಅಂತ್ಯದ ವಾರದಲ್ಲಂತೂ ಧಾರಾಕಾರವಾಗಿ ಮಳೆ ಸುರಿಯುವ ಸೂಚನೆಯಿದೆ.
ಇನ್ನು ಕರ್ನಾಟಕ ಹೊರತುಪಡಿಸಿ ತಮಿಳುನಾಡು, ಲಡಾಖ್ ನಲ್ಲಿ ಕೂಡಾ ಮಳೆ ಸುರಿಯುವ ಸಾಧ್ಯತೆ ಇದೆ. ಆದ್ದರಿಂದ ಈ ಬಾರಿ ಕೃಷಿ ಚಟುವಟಿಕೆಗೆ ಏನೂ ತೊಂದರೆಯಾಗದು ಎನ್ನುವುದು ಜನರ ಅಭಿಪ್ರಾಯ. ಜೂನ್ ಒಂದರಂದು ಕೇರಳಕ್ಕೆ ಮುಂಗಾರು ಎಂಟ್ರಿ ಕೊಡಲಿದೆ ಎನ್ನುವ ಮಾಹಿತಿಯನ್ನು ಕೂಡಾ ಹವಾಮಾನ ಇಲಾಖೆ ನೀಡಿದೆ.

