ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಜಾನುವಾರು ಕಳ್ಳರು ಗರ್ಭಿಣಿ ಗೋವನ್ನು ಕಡಿದು ಮಾಂಸ ಮಾಡಿದ್ದಲ್ಲದೇ ಅದರ ಬಾಲ ಹಾಗೂ ಹೊಟ್ಟೆಯೊಳಗಿದ್ದ ಕರುವನ್ನು ನದಿಯಂಚಿನಲ್ಲಿ ಎಸೆದು ಹೋಗಿ ಮತ್ತೆ ಅಟ್ಟಹಾಸ ಮೆರೆದಿದ್ದಾರೆ.
ಹೊನ್ನಾವರದಲ್ಲಿ ಗರ್ಭಿಣಿ ಗೋವನ್ನು ಕದ್ದು ಮಾಂಸ ಮಾಡಿದ್ದ ಪ್ರಕರಣ ಮರೆಯಾಗುವ ಮುನ್ನವೇ ಮತ್ತೊಮ್ಮೊ ಈ ಘಟನೆ ನಡೆದಿದೆ.
ಪುಟ್ಟ ಕರುವನ್ನು ಗೋಣಿ ಚೀಲದಲ್ಲಿ ಸುತ್ತಿ ಬಿಸಾಡಿ ಹೋಗಲಾಗಿದ್ದು, ದನದ ಉದ್ದನೆಯ ಬಾಲ ಕೂಡಾ ಅಲ್ಲಿಯೇ ಪತ್ತೆಯಾಗಿದೆ. ಬೀದಿ ನಾಯಿಯೊಂದು ಚೀಲವನ್ನು ಎಳೆಯುತ್ತಿರುವಾಗ ಸ್ಥಳೀಯರು ನೋಡಿ ತಕ್ಷಣ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು ತನಿಖೆ ಮುಂದುವೆರೆಸಿದ್ದಾರೆ.

