ಭಾರತ ದೇಶದಲ್ಲಿ ಹಲವಾರು ಆಚಾರ- ವಿಚಾರಗಳು, ಸಂಪ್ರದಾಯಗಳು, ಭಾಷೆ, ಆಹಾರ ಶೈಲಿಗಳಿವೆ. ನಮ್ಮ ದೇಶದಲ್ಲಿ ಒಂದೊಂದು ಆಚರಣೆಗೂ ಅದರದ್ದೇ ಆದ ಕಾರಣಗಳಿವೆ, ನಂಬಿಕೆಗಳಿವೆ. ಸಾಮಾನ್ಯವಾಗಿ ಇಲ್ಲಿ ಮದುವೆಯಾದ ಮಹಿಳೆಯರು ವೈವಾಹಿಕ ಜೀವನದ ಸಂಕೇತವಾಗಿ ಕಾಲುಂಗುರ, ಮಾಂಗಲ್ಯಸೂತ್ರವನ್ನು ಧರಿಸುತ್ತಾರೆ. ಆದರೆ ಇದು ಕೇವಲ ಸಂಪ್ರದಾಯದ ಒಂದು ಭಾಗ ಮಾತ್ರವಲ್ಲ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ.
ಕರಿಮಣಿ ಸರದಲ್ಲಿರುವ ಕಪ್ಪು ಮಣಿಗಳು ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ಸಹಕರಿಸುತ್ತದೆ. ಇದು ಮಹಿಳೆಯನ್ನು ಅಪಾಯದಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ.
ಕಪ್ಪು ಶನಿಯ ಸಂಕೇತ. ಚಿನ್ನವನ್ನು ಗುರು ಆಳುತ್ತದೆ. ಇವೆರಡರ ಸಂಯೋಜನೆಯೇ ಮಂಗಳಸೂತ್ರ. ಇದು ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ದಾಂಪತ್ಯ ಜೀವನಕ್ಕೆ ಮಾನಸಿಕ ಶಾಂತಿಯನ್ನು ಪೂರೈಸುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
ಇನ್ನು ವೈಜ್ಞಾನಿಕವಾಗಿ ಹೇಳೋದಾದ್ರೆ ಗಂಟಲಿನ ಭಾಗದಲ್ಲಿ ಆಭರಣ ಧರಿಸುವುದರಿಂದ ಅದು ಮಾನಸಿಕ ಸ್ಥಿರತೆ, ಸಮರ್ಪಣೆ ಮತ್ತು ಸಾಮರಸ್ಯದ ಅನುಭವ ನೀಡುತ್ತದೆ. ಒಟ್ಟಾರೆಯಾಗಿ ಮಂಗಳಸೂತ್ರ ಧರಿಸುವುದರಿಂದ ಮಹಿಳೆಯರಿಗೆ ವೈಜ್ಞಾನಿಕವಾಗಿಯೂ ಆರೋಗ್ಯದ ವಿಚಾರದಲ್ಲಿ ಬಹಳಷ್ಟು ಲಾಭಗಳಿವೆ.


