ಮುಲ್ಕಿ: ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆದದ್ದು ಪ್ರತೀ ಬಾರಿಯಂತೆ ಈ ವರ್ಷವೂ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ದೇಗುಲಕ್ಕೆ ಭೇಟಿ ನೀಡಿ ಕೃತಾರ್ಥರಾಗಿದ್ದಾರೆ.
ದೇಗುಲದ ಹತ್ತಿರದಲ್ಲೇ ಅವರ ಮನೆಯಿರುವುದರಿಂದ ದೇವರು ಜಳಕ ಮುಗಿಸಿ ಬರುವಾಗ ಸುನಿಲ್ ಶೆಟ್ಟಿ ಮನೆಯ ಮುಂಭಾಗ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆಯುತ್ತದೆ. ಪ್ರತೀ ವರ್ಷ ಅವರು ಮಿಸ್ ಮಾಡದೆ ಆಗಮಿಸುತ್ತಾರೆ.
ಮಗಳ ಮಗುವಿಗೆ ತಾತನಾಗಿರುವ ಸಂಭ್ರಮದಲ್ಲಿ ಸುನಿಲ್ ಶೆಟ್ಟಿ ಇದ್ದಾರೆ. ಜೊತೆಗೆ ಮೊತ್ತಮೊದಲು ತುಳು ಚಿತ್ರದಲ್ಲಿ ಇವರು ನಟಿಸುತ್ತಿರುವುದರಿಂದ ಶೂಟಿಂಗ್ ನಲ್ಲೂ ಬ್ಯುಸಿ ಆಗಿದ್ದಾರೆ.

