ವ್ಯಾಟಿಕನ್ ಸಿಟಿ: ವಿಶ್ವದಾದ್ಯಂತ ಇರುವ ಕೋಟ್ಯಾಂತರ ರೋಮನ್ ಕ್ಯಾಥೋಲಿಕ್ ಕ್ರೈಸ್ತರ ಪರಮ ಪೂಜ್ಯ ಧರ್ಮಗುರುಗಳಾದ ಪೋಪ್ ಫ್ರಾನ್ಸಿಸ್ ಅವರು ನಿಧನರಾಗಿದ್ದಾರೆ.
ಅವರಿಗೆ ಎಂಬತ್ತೆಂಟು ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಇವರು ಸಾವನ್ನಪ್ಪಿದ್ದಾರೆ. ಈ ಬಾರಿ ಗುಡ್ ಫ್ರೈಡೇ ಆಚರಣೆಯಲ್ಲಿ ಕೂಡಾ ಇವರು ಹಾಜರಾಗಿಲ್ಲ.
ವೈದ್ಯರು ವಿಶ್ರಾಂತಿಯಲ್ಲಿರಬೇಕೆಂದು ಸೂಚಿಸಿದ್ದರೂ ನಿನ್ನೆ ಈಸ್ಟರ್ ಭಾನುವಾರದಂದು ಭಕ್ತರಿಗೆ ಕಾಣಿಸಿಕೊಂಡಿದ್ದರು. ಇವರ ನಿಧನಕ್ಕೆ ಕೋಟ್ಯಾಂತರ ಜನ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

