ಉಡುಪಿ: ಉಡುಪಿ ಜಿಲ್ಲೆಯ ಪಶುಪಾಲನಾ ಇಲಾಖೆಯಲ್ಲಿ ನುರಿತ ಅನುಭವಿ ವೈದ್ಯರು ಬೇಕಾಗಿದ್ದು ಇಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಇಲ್ಲದೆ ಜಾನುವಾರುಗಳು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪುವಂತಹ ಪರಿಸ್ಥಿತಿ ಎದುರಾಗಿದೆ.
ಇರುವಂತಹ ನಾಲ್ಕು ಪಶು ವೈದ್ಯಾಧಿಕಾರಿ ಹುದ್ದೆಗಳಲ್ಲಿ ಯಾವುದೂ ಭರ್ತಿಯಾಗದೆ ಇರುವುದರಿಂದ ಜಾನುವಾರುಗಳನ್ನು ಸಾಕುವ ಕೃಷಿಕರು ತೀವ್ರ ಕಷ್ಟಗಳನ್ನು ಎದುರಿಸುವ ಪರಿಸ್ಥಿತಿ ಬಂದಿದೆ. ಜಿಲ್ಲೆಗೆ ಒಟ್ಟು ಮುನ್ನೂರ ಐವತ್ತೇಳು ಹುದ್ದೆಗಳು ಮಂಜೂರಾಗಿದ್ದರೂ ಕೂಡಾ ಎಪ್ಪತ್ತೊಂದು ಹುದ್ದೆಗಳು ಮಾತ್ರ ಭರ್ತಿ ಆಗಿವೆ.
ಜಾನುವಾರುಗಳಿಗೆ ಅನಾರೋಗ್ಯವಾದಲ್ಲಿ ಅಥವಾ ತುರ್ತು ಪರಿಸ್ಥಿತಿ ಎದುರಾದಲ್ಲಿ ಶೀಘ್ರವಾಗಿ ಸ್ಪಂದಿಸಲು ವೈದ್ಯರೇ ಇಲ್ಲ ಎಂದು ಜಾನುವಾರು ಸಾಕುವ ಜನರೂ ಕೂಡಾ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.


