ಪ್ರಕೃತಿ ಕಾಲಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಋತುವಿಗೆ ಸಂಬಂಧಿಸಿದಂತೆ ಹಣ್ಣುಗಳು ಬೆಳೆಯುತ್ತಿರುತ್ತದೆ. ಎಪ್ರಿಲ್ ಮೇ ತಿಂಗಳು ಬಂತೆಂದರೆ ಮಾವಿನ ಹಣ್ಣಿನ ಸೀಸನ್ ಶುರುವಾಗಿ ಬಿಡುತ್ತದೆ. ಹಣ್ಣುಗಳ ರಾಜನಾದ ಮಾವಿನಹಣ್ಣಿಗೆ ಮಾರುಕಟ್ಟೆಯಲ್ಲಿ ಅದರದ್ದೇ ಆದ ಡಿಮ್ಯಾಂಡ್ ಇದೆ. ಆದರೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಈ ಹಣ್ಣನ್ನು ಮುಟ್ಟಬಾರದು.
ಮಾವಿನಹಣ್ಣಿನಲ್ಲಿ ವಿಟಮಿನ್ ಸಿ, ಕರಗುವ ನಾರಿನಾಂಶ ಗುಣಗಳು ಇವೆ. ಇದು ಹೃದಯದ ಆರೋಗ್ಯದ ಜೊತೆಗೆ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗುತ್ತದೆ. ಮಾವಿನಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಕಂಡುಬರುವುದರಿಂದ ಶುಗರ್ ಖಾಯಿಲೆ ಇರುವವರು ಸೇವಿಸಬಹುದು ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಅದು ತಪ್ಪು. ಮಿತಿಯಲ್ಲಿ ಸೇವಿಸುವುದು ಉತ್ತಮ. ಇಲ್ಲವಾದಲ್ಲಿ ಅನೇಕ ರೀತಿಯ ಅಪಾಯಗಳನ್ನು ಇದು ತಂದೊಡ್ಡುತ್ತದೆ.
ಇನ್ನು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಇರುವವರು ಮಿತ ಪ್ರಮಾಣದಲ್ಲಿ ಮಾವಿನಹಣ್ಣನ್ನು ಸೇವಿಸಬೇಕು. ಅದರಲ್ಲೂ ರಾತ್ರಿ ಹೊತ್ತು ಮಾವಿನಹಣ್ಣನ್ನು ಸೇವಿಸಲೇಬಾರದು.
ದೇಹದ ತೂಕ ಇಳಿಕೆ ಮಾಡಲು ಬಯಸುವವರು ಈ ಹಣ್ಣಿನಿಂದ ದೂರವಿರಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಯಾಕೆಂದರೆ ಇದರಲ್ಲಿ ಅಧಿಕ ಪ್ರಮಾಣದ ಕ್ಯಾಲೋರಿ ಅಂಶ ಇರುವುದರಿಂದ ಅಧಿಕ ಪ್ರಮಾಣದಲ್ಲಿ ಸೇವಿಸುತ್ತಿದ್ದರೆ ತೂಕ ಹೆಚ್ಚಾಗಬಹುದು.

