ಬೆಂಗಳೂರು: ಚಂಡಮಾರುತದ ಪರಿಣಾಮ ಇಂದಿನಿಂದ ಕರ್ನಾಟಕದಾದ್ಯಂತ ಈ ವಾರ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಿನ್ನೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿತ್ತು. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿತ್ತು.
ಇನ್ನು ದ.ಕ ಜಿಲ್ಲೆಯ ಕೆಲವು ಕಡೆಗಳಲ್ಲಿ ನಿನ್ನೆ ಸುರಿದ ಧಾರಾಕಾರವಾದ ಮಳೆಯಿಂದಾಗಿ ಅನೇಕ ಕಡೆ ಹಾನಿಯುಂಟಾಗಿದ್ದು ವಿದ್ಯುತ್ ವ್ಯತ್ಯಯ ಕೂಡಾ ಕಂಡುಬಂದಿತ್ತು. ರಾಜ್ಯದ ಕೆಲವು ಕಡೆ ಯೆಲ್ಲೋ ಅಲರ್ಟ್ ಕೂಡಾ ಘೋಷಣೆಯಾಗಿದೆ.

