ಉಡುಪಿ: ಇದೇ ಬರುವ ಎಪ್ರಿಲ್ ೩೦ರಂದು ಅಕ್ಷಯ ತೃತೀಯ ದಿನವಾಗಿದ್ದು ಈ ಪ್ರಯುಕ್ತ ಉಡುಪಿ ಮಠದಲ್ಲಿ ಶ್ರೀ ಕೃಷ್ಣ ದೇವರಿಗೆ ವಸಂತ ಮಹಲ್ ಮಧ್ವ ಮಂಟಪದಲ್ಲಿ ಸುವರ್ಣ ತುಲಾಭಾರ ನಡೆಯಲಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಪಾರ್ಥಸಾರಥಿ ರಥವು ಹದಿನೆಂಟು ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಲಿದೆ. ಇನ್ನು ಕೃಷ್ಣನ ಮೂಲ ವಿಗ್ರಹಕ್ಕೆ ಕನಕಾಭಿಷೇಕ ಮಾಡಿದ ಸುವರ್ಣವನ್ನು ಪ್ರಸಾದ ರೂಪದಲ್ಲಿ ಕೂಡಾ ಪಡೆಯಲು ಅವಕಾಶವಿದೆ ಎಂದು ಹೇಳಿದರು.
ಭಕ್ತರು ತಮ್ಮ ಸೇವೆಯನ್ನು ಆನ್ಲೈನ್ ಮುಖೇನವೂ ಬುಕ್ ಮಾಡಿಕೊಳ್ಳಬಹುದು. ಪತ್ರಿಕಾಗೋಷ್ಠಿಯಲ್ಲಿ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಮೇಶ್ ಭಟ್ ಉಪಸ್ಥಿತರಿದ್ದರು.

