ಶಿರ್ವ: ಮಾದಕವಸ್ತುವಾದ ಗಾಂಜಾವನ್ನು ಸಿಗರೇಟ್ ನಲ್ಲಿ ಸೇರಿಸಿ ಸೇದುತ್ತಿದ್ದ ಯುವಕರನ್ನು ಶಿರ್ವದ ಬಂಟಕಲ್ಲು ಬಸ್ ನಿಲ್ದಾಣದ ಬಳಿ ಪತ್ತೆ ಹಚ್ಚಿದ ಘಟನೆ ನಡೆದಿದೆ.
ಶಿವಪ್ರಸಾದ್ ಮತ್ತು ಆಲ್ವಿನ್ ಶರೂನ್ ಡಿ ಅಲ್ಮೇಡ ಅವರನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ಮಂಜುನಾಥ ಮರಬದ ಅವರು ವಶಕ್ಕೆ ಪಡೆದಿದ್ದಾರೆ.
ಗಾಂಜಾ ಸೇದುತ್ತಿದ್ದ ಯುವಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿಯಲ್ಲಿ ಖಚಿತವಾಗಿದೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

