ಬ್ರಹ್ಮಾವರ ತಾಲ್ಲೂಕಿನ ಮುದ್ದೂರಿನ VSS ಇಂಗ್ಲಿಷ್ ಮೀಡಿಯಂ ಶಾಲೆಯು SSLC ಫಲಿತಾಂಶದಲ್ಲಿ ವಿಶಿಷ್ಟ ಸಾಧನೆಗೈದಿದೆ. VSS ಇಂಗ್ಲಿಷ್ ಮೀಡಿಯಂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 100 ಫಲಿತಾಂಶ ಸಾಧಿಸಿದೆ.
ಪಾಸಾದ ವಿದ್ಯಾರ್ಥಿಗಳಲ್ಲಿ ಶೇ.98% ರಷ್ಟು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿರುವುದು ಶಾಲೆಯ ಕಲಿಕಾ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಶಾಲೆಯು ಕಲಿಕೆಯ ಜೊತೆಗೆ ಮಕ್ಕಳ ಸರ್ವೋತೋಮುಖ ಬೆಳವಣಿಗೆಗೆ ವಿವಿಧ ಚಟುವಟಿಗಳಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದೆ. ಶಾಲೆಯಲ್ಲಿ ಮಕ್ಕಳಿಗೆ ಭರತನಾಟ್ಯ, ಯಕ್ಷಗಾನ , ನಾಟಕದಲ್ಲಿ ತರಬೇತಿ ನೀಡಿದ್ದು ಅತ್ಯುತ್ತಮ ಕಲಾತಂಡವೊಂದನ್ನು ರಚಿಸಿ ಈಗಾಗಲೇ ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಶಾಲೆಯ ಮೊದಲನೇ SSLC ಬ್ಯಾಚ್ ವಿದ್ಯಾರ್ಥಿಗಳೇ ಶೇ 100 ಫಲಿತಾಂಶ ದಾಖಲಿಸಿರುವುದು ಶಾಲೆಯ ಶೈಕ್ಷಣಿಕ ದಾಖಲೆಗೆ ಉತ್ತಮ ಆರಂಭ ನೀಡಿದಂತಾಗಿದೆ. ಶಾಲೆಯ ಈ ಅದ್ಭುತ ಸಾಧನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗಕ್ಕೆ ಶಾಲೆಯ ಆಡಳಿತ ಮಂಡಳಿ ಅಭಿನಂದನೆ ತಿಳಿಸಿದ್ದಾರೆ.


